ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 26 ಆಗಸ್ಟ್‌ 2023

Published 26 ಆಗಸ್ಟ್ 2023, 13:28 IST
Last Updated 26 ಆಗಸ್ಟ್ 2023, 13:28 IST
ಅಕ್ಷರ ಗಾತ್ರ
Introduction

ಇಸ್ರೊ ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಿ ಮೋದಿ, ಕಾವೇರಿ ಜಲ ವಿವಾದ, ಮದುರೈ ರೈಲು ದುರಂತ, ಮುಜಾಫರ್‌ನಗರ ಕಪಾಳ ಮೋಕ್ಷ ಪ್ರಕರಣ, ಟೋಬಿ ಸಿನಿಮಾ, ಏಷ್ಯಾ ಕಪ್‌ ಟೂರ್ನಿ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ......

1

ಆ.23 ರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನ ದಿನ‌ ಎಂದು ಘೋಷಣೆ

ಚಂದ್ರಯಾನ-3ರ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದ ಮೇಲಿಳಿದ ಆಗಸ್ಟ್‌ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಅಲ್ಲದೇ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಸ್ಥಳವನ್ನು ಶಿವಶಕ್ತಿ ಪಾಯಿಂಟ್‌ ಎಂದು ನಾಮಕರಣ ಮಾಡಲಾಗಿದೆ.

ಸಂಪೂರ್ಣ ಸುದ್ದಿ ಓದಲು: ಆ.23 ರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನ ದಿನ‌ ಎಂದು ಘೋಷಣೆ

ಸಂಪೂರ್ಣ ಸುದ್ದಿ ಓದಲು: ಮೋದಿ ಮಾತು: ಚಂದ್ರನ ಮೇಲೆ ಲ್ಯಾಂಡರ್‌ ಇಳಿದ ಸ್ಥಳ 'ಶಿವಶಕ್ತಿ' ಪಾಯಿಂಟ್‌

2

ಕಾವೇರಿ ಜಲ ವಿವಾದ | ವಾಸ್ತವಾಂಶ ನ್ಯಾಯಾಲಯದ ಮುಂದಿಟ್ಟಿದ್ದೇವೆ: ಡಿ.ಕೆ.ಶಿವಕುಮಾರ್

ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ವಾಸ್ತವಾಂಶ ನ್ಯಾಯಾಲಯದ ಮುಂದಿಟ್ಟಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸಂಪೂರ್ಣ ಸುದ್ದಿ ಓದಲು: ಕಾವೇರಿ ಜಲ ವಿವಾದ | ವಾಸ್ತವಾಂಶ ನ್ಯಾಯಾಲಯದ ಮುಂದಿಟ್ಟಿದ್ದೇವೆ: ಡಿ.ಕೆ.ಶಿವಕುಮಾರ್

3

ಇಸ್ರೊ ವಿಜ್ಞಾನಿಗಳ ಅಭಿನಂದಿಸಿದ ಪ್ರಧಾನಿ ಮೋದಿ: ಭಾಷಣದ ಪ್ರಮುಖಾಂಶಗಳು...

ಗ್ರೀಸ್ ರಾಷ್ಟ್ರದ ಪ್ರವಾಸದಿಂದ ಶನಿವಾರ ಬೆಳಿಗ್ಗೆ ಬೆಂಗಳೂರಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಚಂದರಯಾನ-3ರ ಯಶಸ್ಸಿಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿಜ್ಞಾನಿಗಳನ್ನು ಅಭಿನಂದಿಸಿದರು.

ಸಂಪೂರ್ಣ ಸುದ್ದಿ ಓದಲು: ಇಸ್ರೊ ವಿಜ್ಞಾನಿಗಳ ಅಭಿನಂದಿಸಿದ ಪ್ರಧಾನಿ ಮೋದಿ: ಭಾಷಣದ ಪ್ರಮುಖಾಂಶಗಳು...

4

ಮದುರೈ ರೈಲಿನಲ್ಲಿ ಅಗ್ನಿ ಅವಘಡ: 10 ಪ್ರಯಾಣಿಕರು ಸಾವು, 20 ಜನರಿಗೆ ಗಾಯ

ಲಖನೌ–ರಾಮೇಶ್ವರಂ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮುಂಜಾನೆ 5.15ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, 10 ಪ್ರಯಾಣಿಕರು ಮೃತಪಟ್ಟಿದ್ದಾರೆ. 55 ಪ್ರಯಾಣಿಕರು ಇದ್ದ ಆ ಬೋಗಿಯನ್ನು ನಾಗರಕೋಯಿಲ್‌ ಬಳಿ ರೈಲಿಗೆ ಅಳವಡಿಸಲಾಗಿತ್ತು ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಸಂಪೂರ್ಣ ಸುದ್ದಿ ಓದಲು: ಮದುರೈ ರೈಲಿನಲ್ಲಿ ಅಗ್ನಿ ಅವಘಡ: 10 ಪ್ರಯಾಣಿಕರು ಸಾವು, 20 ಜನರಿಗೆ ಗಾಯ

5

ನಂ.4 ಕ್ರಮಾಂಕಕ್ಕೆ ವಿರಾಟ್ ಅತ್ಯುತ್ತಮ ಆಯ್ಕೆ: ಎಬಿ ಡಿ ವಿಲಿಯರ್ಸ್

ಮುಂಬರುವ ಏಷ್ಯಾ ಕಪ್ ಹಾಗೂ ಏಕದಿನ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ನಾಲ್ಕನೇ ಕ್ರಮಾಂಕದಲ್ಲಿ ಯಾವ ಆಟಗಾರ ಬ್ಯಾಟಿಂಗ್ ಮಾಡಬೇಕು ಎಂಬುದರ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ವಿರಾಟ್ ಕೊಹ್ಲಿ ಹೆಸರನ್ನು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್ ಸೂಚಿಸಿದ್ದಾರೆ.

ಸಂಪೂರ್ಣ ಸುದ್ದಿ ಓದಲು: ನಂ.4 ಕ್ರಮಾಂಕಕ್ಕೆ ವಿರಾಟ್ ಅತ್ಯುತ್ತಮ ಆಯ್ಕೆ: ಎಬಿ ಡಿ ವಿಲಿಯರ್ಸ್

6

ವಿದ್ಯಾರ್ಥಿಗೆ ಸಹಪಾಠಿಗಳಿಂದ ಕಪಾಳಮೋಕ್ಷ: ಶಾಲಾ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲು

ಹೋಮ್‌ ವರ್ಕ್‌ ಮಾಡಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬನಿಗೆ ಸಹಪಾಠಿಗಳಿಂದಲೇ ಕಪಾಳಮೋಕ್ಷ ಮಾಡಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಲಾ ಶಿಕ್ಷಕಿ ತ್ರಿಪ್ತ ತ್ಯಾಗಿ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಪೂರ್ಣ ಸುದ್ದಿ ಓದಲು: ವಿದ್ಯಾರ್ಥಿಗೆ ಸಹಪಾಠಿಗಳಿಂದ ಕಪಾಳಮೋಕ್ಷ: ಶಾಲಾ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲು

7

ಅಫ್ಗಾನಿಸ್ತಾನ | ಹಿಂದೂ, ಸಿಖ್ ಅಲ್ಪಸಂಖ್ಯಾತರಿಗೆ ತಾಲಿಬಾನ್ ಕಠಿಣ ನಿರ್ಬಂಧ: ವರದಿ

ಅಫ್ಗಾನಿಸ್ತಾನ ಆಡಳಿತ 2021ರ ಆಗಸ್ಟ್‌ನಲ್ಲಿ ತಾಲಿಬಾನ್‌ ವಶವಾದ ಬಳಿಕ ಮುಸ್ಲಿಮೇತರ ಅಲ್ಪಸಂಖ್ಯಾತ ಸಮುದಾಯಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂಬ ಆತಂಕ ಎದುರಾಗಿತ್ತು. ಅದು ಎರಡೇ ವರ್ಷಗಳಲ್ಲಿ ನಿಜವಾಗಿದೆ ಎಂದು ಯುಎಸ್‌ ಮೂಲಕ ಮಾಧ್ಯಮ ಸಂಸ್ಥೆ ಆರ್‌ಎಫ್‌ಇ/ಆರ್‌ಎಲ್‌ ವರದಿ ಮಾಡಿದೆ.

ಸಂಪೂರ್ಣ ಸುದ್ದಿ ಓದಲು: ಅಫ್ಗಾನಿಸ್ತಾನ | ಹಿಂದೂ, ಸಿಖ್ ಅಲ್ಪಸಂಖ್ಯಾತರಿಗೆ ತಾಲಿಬಾನ್ ಕಠಿಣ ನಿರ್ಬಂಧ: ವರದಿ

8

‘ಟೋಬಿ’ ಚೆನ್ನಾಗಿಲ್ಲ ಎಂದ ಯುವತಿಗೆ ಕಿರುಕುಳ: ಕ್ಷಮೆ ಕೇಳಿದ ರಾಜ್‌ ಬಿ. ಶೆಟ್ಟಿ

‘ಟೋಬಿ’ ಸಿನಿಮಾ ಚೆನ್ನಾಗಿಲ್ಲ ಎಂದು ಹೇಳಿದ ಯುವತಿಗೆ ಯವಕನೊಬ್ಬ ನಿಂದಿಸಿದ ಪ್ರಕರಣ ಸಂಬಂಧ, ಚಿತ್ರನಟ ರಾಜ್‌ ಬಿ. ಶೆಟ್ಟಿಯವರು ಕ್ಷೆಮೆ ಕೋರಿದ್ದಾರೆ. ಈ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸಂಪೂರ್ಣ ಸುದ್ದಿ ಓದಲು: ‘ಟೋಬಿ’ ಚೆನ್ನಾಗಿಲ್ಲ ಎಂದ ಯುವತಿಗೆ ಕಿರುಕುಳ: ಕ್ಷಮೆ ಕೇಳಿದ ರಾಜ್‌ ಬಿ. ಶೆಟ್ಟಿ

9

ಮಂಗಳೂರು | ಇಬ್ಬರು ವಿದ್ಯಾರ್ಥಿಗಳ ಅಪಹರಣ ಪ್ರಕರಣ: ಏಳು ಆರೋಪಿಗಳ ಬಂಧನ

ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಿ ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿದ ಬಗ್ಗೆ ನಗರ ಉತ್ತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಸಂಬಂಧ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಂಪೂರ್ಣ ಸುದ್ದಿ ಓದಲು: ಮಂಗಳೂರು | ಇಬ್ಬರು ವಿದ್ಯಾರ್ಥಿಗಳ ಅಪಹರಣ ಪ್ರಕರಣ: ಏಳು ಆರೋಪಿಗಳ ಬಂಧನ

10

ಆತ್ಮಗೌರವ, ಸ್ವಾಭಿಮಾನ ಇಲ್ಲದೆ ಬಿಜೆಪಿಯವರು ಕೈ ಬೀಸಿದ್ದಾರೆ: ಕಾಂಗ್ರೆಸ್‌ ಚಾಟಿ

ಚಂದ್ರಯಾನ–3ರ ಯಶಸ್ಸಿಗೆ ಇಸ್ರೊ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಿದ್ದ ವೇಳೆ, ಬ್ಯಾರಿಕೇಡ್‌ ಹಿಂದೆ ನಿಂತು ಕೈ ಬೀಸಿದ್ದ ಬಿಜೆಪಿ ನಾಯಕರ ಬಗ್ಗೆ ಕಾಂಗ್ರೆಸ್‌ ಕುಹಕವಾಡಿದೆ.

ಸಂಪೂರ್ಣ ಸುದ್ದಿ ಓದಲು: ಆತ್ಮಗೌರವ, ಸ್ವಾಭಿಮಾನ ಇಲ್ಲದೆ ಬಿಜೆಪಿಯವರು ಕೈ ಬೀಸಿದ್ದಾರೆ: ಕಾಂಗ್ರೆಸ್‌ ಚಾಟಿ