ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News | ಈ ದಿನದ ಪ್ರಮುಖ ಸುದ್ದಿಗಳು: ಅಕ್ಟೋಬರ್ 21 ಶನಿವಾರ 2023

Published 21 ಅಕ್ಟೋಬರ್ 2023, 13:31 IST
Last Updated 21 ಅಕ್ಟೋಬರ್ 2023, 13:31 IST
ಅಕ್ಷರ ಗಾತ್ರ
Introduction

ಸಾರಿಗೆ ನಿಗಮಗಳಿಗೆ 5,675 ಬಸ್‌ ಖರೀದಿ: ಮುಖ್ಯಮಂತ್ರಿ ಸಿದ್ದರಾಮಯ್ಯ, ನೇಕಾರರಿಗೆ ಸಿಹಿ ಸುದ್ದಿ; ಮಗ್ಗಗಳಿಗೆ ಉಚಿತ ವಿದ್ಯುತ್‌: ಜವಳಿ ಸಚಿವ ಶಿವಾನಂದ, ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ 3.75ರಷ್ಟು ಹೆಚ್ಚಳ ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ.

1

ಸಾರಿಗೆ ನಿಗಮಗಳಿಗೆ 5,675 ಬಸ್‌ ಖರೀದಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 5,675 ಬಸ್‌ಗಳನ್ನು ಖರೀದಿಸಲು ಪ್ರಕ್ರಿಯೆ ತ್ವರಿತಗೊಳಿಸುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.

ಸಂಪೂರ್ಣ ಸುದ್ದಿ ಓದಿ

2

ನೇಕಾರರಿಗೆ ಸಿಹಿ ಸುದ್ದಿ; ಮಗ್ಗಗಳಿಗೆ ಉಚಿತ ವಿದ್ಯುತ್‌: ಜವಳಿ ಸಚಿವ ಶಿವಾನಂದ

ಆರ್ಥಿಕ ಸಂಕಷ್ಟದಲ್ಲಿರುವ ನೇಕಾರರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ ದಸರಾ, ದೀಪಾವಳಿ  ಕೊಡುಗೆಯಾಗಿ ಉಚಿತ ವಿದ್ಯುತ್‌ ನೀಡಲು ಆದೇಶ ಹೊರಡಿಸಿದೆ. 10 ಎಚ್‌.ಪಿ. ವರೆಗಿನ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳಿಗೆ ಮಾಸಿಕ ಗರಿಷ್ಠ 250 ಯುನಿಟ್‌ವರೆಗೆ ಉಚಿತ ವಿದ್ಯುತ್‌ ಒದಗಿಸುವ ಕ್ರಮಕೈಗೊಳ್ಳಲಾಗಿದೆ ಎಂದು ಸಚಿವ ಶಿವಾನಂದ ಎಸ್. ಪಾಟೀಲ ತಿಳಿಸಿದರು.

ಸಂಪೂರ್ಣ ಸುದ್ದಿ ಓದಿ

3

ಹೃದಯ ಶಸ್ತ್ರಚಿಕಿತ್ಸೆ: ಬಸವರಾಜ ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಬಿಜೆಪಿ ಶಾಸಕ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಶನಿವಾರ) ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

ಸಂಪೂರ್ಣ ಸುದ್ದಿ ಓದಿ

4

20 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ: ಸಚಿವ ಮಧು ಬಂಗಾರಪ್ಪ

‘ನಮ್ಮ ಪಕ್ಷ ಅಧಿಕಾರಕ್ಕೆ ಬಂದು ಮೂರೂವರೆ ತಿಂಗಳಷ್ಟೇ ಆಗಿದೆ. ಗ್ರಾಮೀಣ ಭಾಗದಲ್ಲಿ ಶಿಕ್ಷಕರ ಕೊರತೆಯಿರುವುದು ಗಮನಕ್ಕಿದ್ದು, 2024ರ ಅಂತ್ಯದ ವೇಳೆಗೆ 20 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.

ಸಂಪೂರ್ಣ ಸುದ್ದಿ ಓದಿ

5

ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ 3.75ರಷ್ಟು ಹೆಚ್ಚಳ

ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ 3.75 ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ 38.75ಗೆ ಏರಿಕೆಯಾಗಿದೆ.


ಸಂಪೂರ್ಣ ಸುದ್ದಿ ಓದಿ

6

ನಕಲಿ‌ ಚುನಾವಣಾ ಗುರುತಿನ ಚೀಟಿ: ಸಚಿವ ಭೈರತಿ ಬೆಂಬಲಿಗ ಸೇರಿ ಮೂವರ ಬಂಧನ

ನಕಲಿ ಚುನಾವಣಾ ಗುರುತಿನ ಚೀಟಿ, ಆಧಾರ್ ಹಾಗೂ ಚಾಲನೆ ಪರವಾನಗಿ ಸೃಷ್ಟಿಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಂಪೂರ್ಣ ಸುದ್ದಿ ಓದಿ

7

Rajasthan Elections: 33 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ರಾಜಸ್ಥಾನ ವಿಧಾನಸಭೆ ಚುನಾವಣೆಗೆ 33 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್‌ ಶನಿವಾರ ಬಿಡುಗಡೆಗೊಳಿಸಿದೆ. ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರು ಸರ್ದಾರಪುರ ಕ್ಷೇತ್ರದಿಂದ ಕಣಕ್ಕಿಳಿದರೆ, ಟೋಂಕ್‌ನಿಂದ ಸಚಿನ್‌ ಪೈಲಟ್ ಸ್ಪರ್ಧೆ ಮಾಡಲಿದ್ದಾರೆ.

ಸಂಪೂರ್ಣ ಸುದ್ದಿ ಓದಿ

8

ಪಾಕ್‌ ಕ್ಷಿಪಣಿ ಯೋಜನೆಗೆ ನೆರವು: ಚೀನಾದ 3 ಕಂಪನಿಗಳಿಗೆ ಅಮೆರಿಕ ನಿರ್ಬಂಧ

ಪಾಕಿಸ್ತಾನದ ಬ್ಯಾಲಿಸ್ಟಿಕ್ ಕ್ಷಿಪಣಿಗೆ ಬಳಸುವ ಸಾಧನಗಗಳನ್ನು ಪೂರೈಕೆ ಮಾಡಿರುವ ಚೀನಾ ಮೂಲದ ಮೂರು ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧಗಳನ್ನು ವಿಧಿಸಿದೆ. ಪಾಕಿಸ್ತಾನವು ಅಬಾಬೀಲ್ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ ಪರೀಕ್ಷೆ ನಡೆಸಿದ ಕೆಲವು ದಿನಗಳ ನಂತರ ಅಮೆರಿಕ ಈ ನಿರ್ಬಂಧಗಳನ್ನು ಹೇರಿದೆ.

ಸಂಪೂರ್ಣ ಸುದ್ದಿ ಓದಿ

9

ಇ–ಕಾಮರ್ಸ್‌ ಹಬ್ಬದ ಮಾರಾಟ: ಮೊದಲ ವಾರ ₹47 ಸಾವಿರ ಕೋಟಿ ಮೌಲ್ಯದ ವಹಿವಾಟು

ಇ–ಕಾಮರ್ಸ್‌ ವಲಯದ ಕಂಪನಿಗಳು ಹಬ್ಬದ ಋತುವಿನ ಮೊದಲ ವಾರ ₹47 ಸಾವಿರ ಕೋಟಿ ಮೌಲ್ಯದಷ್ಟು ಮಾರಾಟ ನಡೆಸಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಮಾರಾಟದಲ್ಲಿ 19ರಷ್ಟು ಹೆಚ್ಚಳ ಆಗಿದೆ ಎಂದು ಸಂಶೋಧನಾ ಸಂಸ್ಥೆ ರೆಡ್‌ಶೀರ್ ಸ್ಟ್ರ್ಯಾಟಜಿ ಕನ್ಸಲ್ಟಂಟ್ಸ್‌ ತಿಳಿಸಿದೆ.

ಸಂಪೂರ್ಣ ಸುದ್ದಿ ಓದಿ

10

ICC World Cup | ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಭಾರತೀಯ ಕ್ರಿಕೆಟಿಗ: ವಾರ್ನರ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್‌ ಬ್ಯಾಟರ್‌ ಡೇವಿಡ್‌ ವಾರ್ನರ್‌ ಅವರು ವಿರಾಟ್ ಕೊಹ್ಲಿ ಅವರನ್ನು ತಮ್ಮಿಷ್ಟದ ಭಾರತೀಯ ಕ್ರಿಕೆಟಿಗ ಎಂದು ಹೇಳಿದ್ದಾರೆ.

ಸಂಪೂರ್ಣ ಸುದ್ದಿ ಓದಿ