ಚೈಬಾಸಾ (ಜಾರ್ಖಂಡ್): ಮದುವೆ ನಿಶ್ಚಯವಾಗಿದ್ದ ಯುವತಿಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರಿ ವರದಕ್ಷಿಣೆ ಕಾರಣದಿಂದಾಗಿ ಮದುವೆ ಮುರಿದು ಬಿದ್ದಿದ್ದು, ಯುವತಿಯ ಆಕ್ಷೇಪಾರ್ಹ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದಡಿ ಬಿಹಾರದ ಔರಂಗಾಬಾದ್ ಜಿಲ್ಲೆಯ 39 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಇವರಿಬ್ಬರು ಹಲವು ವರ್ಷಗಳ ಹಿಂದೆ ಮದುವೆ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು. ಆ ಬಳಿಕ ಇಬ್ಬರ ನಡುವೆ ಇದ್ದ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಆರೋಪಿ, ಯುವತಿಯ ಖಾಸಗಿ ಫೋಟೊ ಮತ್ತು ವಿಡಿಯೊಗಳನ್ನು ಸಂಗ್ರಹಿಸಿದ್ದನು.
.AI ವಿಸ್ತರಣೆಗೆ ಬೆಂಬಲ: ಭಾರತದಲ್ಲಿ ₹1.57 ಲಕ್ಷ ಕೋಟಿ ಹೂಡಿಕೆ; ಸತ್ಯ ನಾದೆಲ್ಲಾ.ಋತುಚಕ್ರದ ರಜೆ: ಗಂಟೆಗಳ ಅಂತರದಲ್ಲೇ ತನ್ನದೇ ತಡೆಯಾಜ್ಞೆ ಹಿಂಪಡೆದ ನ್ಯಾಯಮೂರ್ತಿ..!.
ಈ ಹಿಂದೆ ಸಂತ್ರಸ್ತೆಗೆ ಮದುವೆಯಾಗುವುದಾಗಿ ಆರೋಪಿ ಭರವಸೆ ನೀಡಿದ್ದನು. ಆದರೆ ಯುವತಿಯ ಮನೆಯವರು ವರದಕ್ಷಿಣೆ ನೀಡಲು ಸಾಮರ್ಥರಲ್ಲ ಎಂದು ತಿಳಿದ ಬಳಿಕ ಮದುವೆಯನ್ನು ನಿರಾಕರಿಸಿದ್ದಾನೆ. ಜತೆಗೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಎಂದು ಯುವತಿ ದೂರಿನಲ್ಲಿ ದಾಖಲಿಸಿದ್ದಾರೆ.

ಐದು ಲಕ್ಷ ಹಣಕ್ಕಾಗಿ ಆರೋಪಿ ಬೇಡಿಕೆ ಇಟ್ಟಿದ್ದನು. ಹಣ ನೀಡದಿದ್ದರೆ ಖಾಸಗಿ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದಾಗಿ ತಿಳಿಸಿದ್ದನು. ಆದರೆ ಹಣ ನೀಡಲು ವಿಫಲರಾದ ಕಾರಣ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
.BBK12 | ಶುರುವಾಯ್ತು ನಾಮಿನೇಷನ್ ಬಿಸಿ: ತಾರಕಕ್ಕೇರಿದ ಅಶ್ವಿನಿ, ರಜತ್ ಗಲಾಟೆ.Health | ಅಕ್ಕಪಕ್ಕದವರ ನಿದ್ದೆಗೆಡಿಸುವ ಗೊರಕೆ: ನಿಯಂತ್ರಣಕ್ಕೆ ಇಲ್ಲಿದೆ ಉಪಾಯ.
ಈ ನಡುವೆ ಆರೋಪಿಯು ಮತ್ತೊಬ್ಬ ಮಹಿಳೆಯೊಂದಿಗೆ ಮದುವೆಯಾಗಿದ್ದನು. ಆರೋಪಿಯ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯ ಸಹಚರನನ್ನು ಪತ್ತೆ ಹಚ್ಚುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
.ಹಾಲಿನ ಉತ್ಪನ್ನಗಳು: ಚಳಿಗಾಲದಲ್ಲಿ ಇವುಗಳ ಸೇವನೆ ಆರೋಗ್ಯಕರವೇ? ಇಲ್ಲಿದೆ ಮಾಹಿತಿ.ನಟಿ ತಮನ್ನಾ ಭಾಟಿಯಾ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ: ಜಯಶ್ರೀಯಾದ ಮಿಲ್ಕಿ ಬ್ಯೂಟಿ.Joint Pain | ಚಳಿಗಾಲದಲ್ಲಿ ಕೀಲು ನೋವು, ಉರಿಯೂತ: ಇಲ್ಲಿವೆ ಪರಿಣಾಮಕಾರಿ ಸಲಹೆಗಳು.ಭಾರತ ಪೌರತ್ವಕ್ಕೂ ಮುನ್ನವೇ ಮತದಾರರ ಪಟ್ಟಿಯಲ್ಲಿ ಹೆಸರು:ಸೋನಿಯಾಗೆ ಕೋರ್ಟ್ ನೋಟಿಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.