ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂನಲ್ಲಿ ಪ್ರಿಯಾಂಕಾ, ರಾಹುಲ್ 'ಅಪ್ರಸ್ತುತ': ಸಿಎಂ ಹಿಮಂತ ಬಿಸ್ವ

Published 3 ಮೇ 2024, 10:23 IST
Last Updated 3 ಮೇ 2024, 10:23 IST
ಅಕ್ಷರ ಗಾತ್ರ

ಗುವಾಹಟಿ: ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ 'ಅಪ್ರಸ್ತುತ' ಎನಿಸಿದ್ದು, 'ಎಕ್ಸ್‌ಪೈರಿ ಡೇಟು' ಕಳೆದಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಲೇವಡಿ ಮಾಡಿದ್ದಾರೆ.

ಅಸ್ಸಾಂನಲ್ಲಿ ಮಾಫಿಯಾ ರಾಜ್ ಇದೆ ಎಂಬ ಪ್ರಿಯಾಂಕಾ ಗಾಂಧಿ ಅವರ ಆರೋಪವನ್ನು ತಳ್ಳಿಹಾಕಿರುವ ಅವರು, ‘ರಾಜ್ಯದಾದ್ಯಂತ ಶಾಂತಿ ನೆಲೆಸಿದೆ ಮತ್ತು ಎಲ್ಲಾ ಕಲ್ಯಾಣ ಯೋಜನೆಗಳು ಜನರನ್ನು ತಲುಪುತ್ತಿವೆ’ ಎಂದು ತಿಳಿಸಿದರು.

ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಮಾಡಿದ್ದ ವಾಷಿಂಗ್‌ ಮೆಷನ್‌ ಆರೋಪಕ್ಕೆ ತಿರುಗೇಟು ನೀಡಿದ ಶರ್ಮಾ, ‘ಕಾಂಗ್ರೆಸ್‌ ಬಳಿ ದೊಡ್ಡ ಹಾಗೂ ಹೆಚ್ಚಿನ ವೋಲ್ಟೇಜ್‌ ಹೊಂದಿದ ವಾಷಿಂಗ್‌ ಮೆಷನ್‌ ಇದೆ. ಅದನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಮಾಡಿರುವ ಭ್ರಷ್ಟಚಾರವನ್ನು ತೊಳೆದು ಹಾಕಲು ಬಳಸುತ್ತಾರೆ’ ಎಂದು ಆರೋಪಿಸಿದರು.

ಸಿಎಂ ಕೇಜ್ರಿವಾಲ್‌ ಅವರು ಅಬಕಾರಿ ಹಗರಣದ ಮೂಲಕ ಹಣವನ್ನು ಲೂಟಿ ಮಾಡಿದ್ದಾರೆ ಎಂದು ನಾಲ್ಕು ತಿಂಗಳ ಹಿಂದೆ ಅಷ್ಟೇ ಪ್ರಿಯಾಂಕಾ ಅವರು ಹೇಳಿದ್ದರು. ಆದರೆ, ಈಗ ಕೇಜ್ರಿವಾಲ್‌ ಉತ್ತಮ ವ್ಯಕ್ತಿ ಎಂದು ಹೇಳುತ್ತಿದ್ದಾರೆ. ಯಾವ ವಾಷಿಂಗ್‌ ಮೆಷನ್‌ನಲ್ಲಿ ಕೇಜ್ರಿವಾಲ್‌ ಅವರು ಮಾಡಿದ ಭ್ರಷ್ಟಚಾರವನ್ನು ಸ್ವಚ್ಛಗೊಳಿಸಿದರು ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT