ನವದೆಹಲಿ: ‘ಗಡಿಪಾರಿನ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯ ಪತ್ತೆ ಮತ್ತು ಬಂಧನಕ್ಕಾಗಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಇಂಟರ್ಪೋಲ್ ತೆಗೆದುಕೊಳ್ಳುತ್ತಿದ್ದ ಸಮಯವು ಈಗ ಗಣನೀಯವಾಗಿ ಕಡಿಮೆಯಾಗಿದೆ‘ ಎಂದು ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಹೇಳಿದರು.

‘ದೇಶಭ್ರಷ್ಟರ ಸ್ಥಳಾಂತರ:ಸವಾಲುಗಳು ಮತ್ತು ತಂತ್ರಗಳು’ ಎಂಬ ವಿಷಯದ ಕುರಿತು ಸಿಬಿಐ ಗುರುವಾರ ಇಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮ ಉದ್ಘಾಟಿಸಿದರು.

‘ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಸಿಬಿಐ ಸಲ್ಲಿಸಿರುವ ಎಂಟು ಮನವಿಗಳು ಮಾತ್ರ ಸದ್ಯ ಇಂಟರ್ಪೋಲ್ನಲ್ಲಿ ಬಾಕಿ ಉಳಿದಿವೆ’ ಎಂದು ಪ್ರವೀಣ್ ಸೂದ್ ಹೇಳಿದರು.

ಅಪರಾಧ ಕೃತ್ಯಗಳಲ್ಲಿ ಬೇಕಾಗಿರುವ ವ್ಯಕ್ತಿಗಳನ್ನು ಹಸ್ತಾಂತರಿಸುವಂತೆ ಭಾರತವು ವಿವಿಧ ದೇಶಗಳಿಗೆ ಸಲ್ಲಿಸಿರುವ 338 ಮನವಿಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ. ಈ ವರ್ಷದಲ್ಲಿ ಇದುವರೆಗೆ, ದೇಶದಿಂದ ಪಲಾಯನ ಮಾಡಿದ 35 ಅಪರಾಧಿಗಳನ್ನು ವಾಪಸ್ ಭಾರತಕ್ಕೆ ತರಲಾಗಿದೆ’ ಎಂದು ಸೂದ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.