'ಸಂಸತ್ತಿಗೆ ನಮ್ಮ ಟ್ರ್ಯಾಕ್ಟರ್ ಜಾಥಾ ಇನ್ನೂ ಕೈಬಿಟ್ಟಿಲ್ಲ. ಅಂದೋಲನದ ಭವಿಷ್ಯ ಹಾಗೂ ಎಂಎಸ್‌ಪಿ ಸಮಸ್ಯೆಗಳ ಕುರಿತು ಭಾನುವಾರ ಸಿಂಘು ಗಡಿಯಲ್ಲಿ ಸೇರಲಿರುವ ಸಂಯುಕ್ತ ಕಿಸಾನ್ ಮೋರ್ಚಾ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು' ಎಂದು ರೈತ ಮುಖಂಡ ದರ್ಶನ್ ಪಾಲ್ ತಿಳಿಸಿದ್ದಾರೆ.
ಜನವರಿ 26, ಗಣರಾಜ್ಯೋತ್ಸವ ದಿನದಂದು ರೈತರು ಕೆಂಪು ಕೋಟೆಗೆ ನಡೆಸಿದ ಟ್ರಾಕ್ಟರ್ ಜಾಥಾದಲ್ಲಿ ಬಾರಿ ಹಿಂಸಾಚಾರ ನಡೆದಿತ್ತು.