ನವದೆಹಲಿ: ಗೃಹಸಚಿವ ಅಮಿತ್ ಶಾ ಅವರ ನಿವಾಸದವರೆಗೆ ಮೆರವಣಿಗೆ ನಡೆಸಲು ಶಾಹೀನ್ ಬಾಗ್ ಪ್ರತಿಭಟನಕಾರರಿಗೆ ಭಾನುವಾರ ಪೊಲೀಸರು ಅಡ್ಡಿಪಡಿಸಿದರು.

ಮೆರವಣಿಗೆ ನಡೆಸಲು ಶಾಹೀನ್ ಬಾಗ್‌ನಲ್ಲಿ ನೂರಾರು ಮಹಿಳೆಯರು ನೆರೆದಿದ್ದರು. ಆದರೆ ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ, ಬ್ಯಾರಿಕೇಡ್‌ಗಳನ್ನು ಇರಿಸಿ ಮಹಿಳೆಯರನ್ನು ತಡೆದರು.

ಈ ವೇಳೆ ಹಿರಿಯ ಮಹಿಳೆಯರನ್ನೊಳಗೊಂಡ ನಿಯೋಗದ ಮೂಲಕ ಪೊಲೀಸರೊಂದಿಗೆ ಸಂಧಾನಕ್ಕೆ ಮುಂದಾದ ರ್‍ಯಾಲಿ ಆಯೋಜಕರು, ‘ಶಾಂತಿಯುತವಾಗಿ ರ್‍ಯಾಲಿ ಮೂಲಕ ಶಾ ನಿವಾಸ ತಲುಪಿ ಚರ್ಚೆ ನಡೆಸುತ್ತೇವೆ. ಇದಕ್ಕೆ ಅನುಮತಿ ನೀಡಬೇಕು’ ಎಂದು ಕೋರಿದರು. ಆದರೆ ಅನುಮತಿ ದೊರಕದ ಕಾರಣ ಪ್ರತಿಭಟನಕಾರರು ಮತ್ತೆ ಧರಣಿ ಸ್ಥಳಕ್ಕೆ ಮರಳಿದರು.

‘ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಕುರಿತು ಚರ್ಚೆ ನಡೆಸಲು ಬಯಸುವವರು ನನ್ನ ಕಚೇರಿ ಸಂಪರ್ಕಿಸುವ ಮೂಲಕ ನನ್ನನ್ನು ಭೇಟಿ ಮಾಡಲು ಸಮಯ ನಿಗದಿಪಡಿಸಿಕೊಳ್ಳಬಹುದು’ ಎಂದು ಶಾ ಹೇಳಿದ್ದರು. ಈ ಸಲುವಾಗಿ ಮೆರವಣಿಗೆ ಮೂಲಕ ಅವರ ನಿವಾಸಕ್ಕೆ ತೆರಳಿ ಚರ್ಚೆ ನಡೆಸಲು ಪ್ರತಿಭಟನಕಾರರು ಮುಂದಾಗಿದ್ದರು.

‘ಅಭಿಪ್ರಾಯ ಹೇರುವ ಯತ್ನ’
ಪಣಜಿ (ಪಿಟಿಐ): ಸಿಎಎ ವಿರೋಧಿಸಿ ಶಾಹೀನ್ ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಟೀಕಿಸಿರುವ ಕೇರಳ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಅವರು, ‘ಇದು ಬೇರೆಯವರ ಮೇಲೆ ಅಭಿಪ್ರಾಯಗಳನ್ನು ಹೇರುವ ಯತ್ನವಾಗಿದೆ’ ಎಂದಿದ್ದಾರೆ.

‘ಪ್ರತಿಭಟನಕಾರರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಆದರೆ ಜನಸಾಮಾನ್ಯರ ಜೀವನ ಅಸ್ತವ್ಯಸ್ತಗೊಳಿಸಲು ಹಕ್ಕಿಲ್ಲ’ ಎಂದು ಹೇಳಿದ್ದಾರೆ.

ದಕ್ಷಿಣ ದೆಹಲಿ ಹಾಗೂ ನೋಯ್ಡಾ ಮಧ್ಯೆ ಸಂಪರ್ಕ ಕಲ್ಪಿಸುವ ಶಾಹೀನ್ ಬಾಗ್‌ನಲ್ಲಿ ಕಳೆದ ಎರಡು ತಿಂಗಳಿಂದ ಧರಣಿ ನಡೆಯುತ್ತಿರುವುದರಿಂದ ಇಲ್ಲಿ ವಾಹನ ಸಂಚಾರ ರದ್ದುಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.