ನವದೆಹಲಿ: ಎಂಜಿನ್ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದ ಕಾರಣ ಬೆಂಗಳೂರಿನಿಂದ ಪುಣೆಗೆ ಹೊರಟಿದ್ದ ಗೋ ಏರ್ ಸಂಸ್ಥೆಯ ವಿಮಾನ (ಏರ್ಬಸ್ ಎ 320)ಶನಿವಾರ ಬೆಂಗಳೂರಿಗೆ ಮರಳಿದೆ.

‘ದಾರಿ ಮಧ್ಯೆ ವಿಮಾನದ ಎಂಜಿನ್ನಲ್ಲಿ ತೊಂದರೆ ಕಾಣಿಸಿಕೊಂಡಿತಲ್ಲದೇ, ಈ ಕುರಿತಂತೆ ಸಂಬಂಧಿಸಿದಂತೆ ಸಿಬ್ಬಂದಿಯಿಂದ ಪೈಲಟ್ಗೆ ತುರ್ತು ಸಂದೇಶ ರವಾನೆಯಾಯಿತು. ತಕ್ಷಣ ವಿಮಾನವನ್ನು ಬೆಂಗಳೂರು ನಿಲ್ದಾಣದಲ್ಲಿ ಇಳಿಸಲಾಯಿತು’ ಎಂದು ಗೋ ಏರ್ ವಕ್ತಾರರು ತಿಳಿಸಿದ್ದಾರೆ.

‘ವಿಮಾನದಲ್ಲಿದ್ದ ಎಲ್ಲ 169 ಪ್ರಯಾಣಿಕರಿಗೆ ಬೇರೆ ವಿಮಾನಗಳ ವ್ಯವಸ್ಥೆಯನ್ನೂ ಮಾಡಲಾಯಿತು’ ಎಂದೂ ತಿಳಿಸಿದರು.

ಎಂಜಿನ್ನಲ್ಲಿ ತಾಂತ್ರಿಕ ತೊಂದರೆ ಕಾರಣ ಇತ್ತೀಚೆಗೆ ಗೋ ಏರ್ ಸಂಸ್ಥೆಗೆ ಸೇರಿದ ಎರಡು ವಿಮಾನಗಳು ತುರ್ತು ಭೂಸ್ಪರ್ಶ ಮಾಡಿದ್ದವು ಎಂದು ಡಿಜಿಸಿಎ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.