ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಶೆ ಅಪಘಾತ: ಕಾರಿನ ನೋಂದಣಿ ರದ್ದು ಪ್ರಕ್ರಿಯೆ ಆರಂಭಿಸಿದ RTO ಅಧಿಕಾರಿಗಳು

Published 23 ಮೇ 2024, 10:47 IST
Last Updated 23 ಮೇ 2024, 10:47 IST
ಅಕ್ಷರ ಗಾತ್ರ

ಪುಣೆ: ಅಪ್ರಾಪ್ತ ಚಲಾಯಿಸಿ ಇಬ್ಬರ ಸಾವಿಗೆ ಕಾರಣವಾದ ಪೋಶೆ ಕಾರಿನ ತಾತ್ಕಾಲಿಕ ನೋಂದಣಿಯನ್ನು ರದ್ದು ಮಾಡುವ ಪ್ರಕ್ರಿಯೆಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

‘ಅಪ್ರಾಪ್ತರು ವಾಹನ ಚಲಾಯಿಸಿದ ಪ್ರಕರಣದಲ್ಲಿ ವಾಹನದ ನೋಂದಣಿಯನ್ನು 12 ತಿಂಗಳವರೆಗೆ ರದ್ದು ಮಾಡುವ ಅವಕಾಶ ಮೋಟಾರು ವಾಹನ ಕಾಯ್ದೆಯಡಿ ಇದೆ. ನಾವು ಈಗ ಕಾರಿನ ತಾತ್ಕಾಲಿಕ ನೋಂದಣಿಯನ್ನು ರದ್ದು ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಈ ಸಂಬಂಧ ಕಾರಿನ ಮಾಲೀಕರಿಗೆ ನೋಟಿಸ್ ನೀಡಿದ್ದೇವೆ’ ಎಂದು ಆರ್‌ಟಿಒ ಅಧಿಕಾರಿ ಸಂಜೀವ್ ಭೋರ್ ತಿಳಿಸಿದ್ದಾರೆ.

ಬೆಂಗಳೂರಿನಿಂದ ಪುಣೆಗೆ ತರಲು ಕಾರಿಗೆ ತಾತ್ಕಾಲಿಕ ನೋಂದಣಿ ನೀಡಲಾಗಿತ್ತು. ಸರಿಯಾದ ನೋಂದಣಿ ಸಂಖ್ಯೆ ಇಲ್ಲದೆ ಕಾರನ್ನು ಚಲಾಯಿಸುವುದು ಕೂಡ ಅಪರಾಧ ಎಂದು ಅವರು ಹೇಳಿದ್ದಾರೆ.

ಐಷಾರಾಮಿ ಸ್ಪೋರ್ಟ್ ಸೆಡನ್ ‘ಪೋಶೆ ಟೇಕನ್’ ಅನ್ನು ಬೆಂಗಳೂರು ಮೂಲದ ಡೀಲರ್‌ ಒಬ್ಬರು ವಿದೇಶದಿಂದ ಆಮದು ಮಾಡಿಕೊಂಡು, ತಾತ್ಕಾಲಿಕ ನೋಂದಣಿಯೊಂದಿಗೆ ಮಹಾರಾಷ್ಟ್ರಕ್ಕೆ ಕಳುಹಿಸಿದ್ದರು.

ಘಟನೆಯ ಬಳಿಕ ಪುಣೆಯ ಆರ್‌.ಟಿ.ಒ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ನೋಂದಣಿ ಶುಲ್ಕ ಭಾಗಶಃ ಪಾವತಿಗೆ ಬಾಕಿ ಇತ್ತು. ದಾಖಲೆಗಳ ಕೆಲಸ ಪೂರ್ಣಗೊಳಿಸಲು ಶುಲ್ಕ ‍ಪಾವತಿಸಲು ಮಾಲೀಕರಿಗೆ ಸೂಚಿಸಲಾಗಿತ್ತು. ಆದರೆ ಶುಲ್ಕ ಪಾವತಿಸದ ಕಾರಣ ಶಾಶ್ವತ ನೋಂದಣಿ ಆಗಿರಲಿಲ್ಲ.

ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್ ಅಗರ್ವಾಲ್ ಅವರ 17 ವರ್ಷದ ಪುತ್ರ ಕುಡಿದು ಈ ಕಾರನ್ನು ಚಲಾಯಿಸಿ ಇಬ್ಬರು ಸಾಫ್ಟ್‌ವೇರ್ ಎಂಜಿನಿಯರ್‌ಗಳ ಸಾವಿಗೆ ಕಾರಣವಾಗಿದ್ದ. ಮುಂಬೈನ ಕಲ್ಯಾಣಿ ನಗರದಲ್ಲಿ ಘಟನೆ ನಡೆದಿತ್ತು. ಪ್ರಕರಣದಲ್ಲಿ ಬಾಲಕನನ್ನು ಜೂನ್ 5ರವರೆಗೆ ಬಾಲ ವೀಕ್ಷಣಾಯದಲ್ಲಿ ಇರಿಸಲಾಗಿದೆ. ತಂದೆಗೆ ಮೇ 24ರ ವರೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT