ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ರಮ ಗಣಿಗಾರಿಕೆ: 13 ಕಡೆ ಇ.ಡಿ ಶೋಧ, ನಗದು ವಶ

Published 29 ಮೇ 2024, 13:40 IST
Last Updated 29 ಮೇ 2024, 13:40 IST
ಅಕ್ಷರ ಗಾತ್ರ

ಚಂಡೀಗಢ: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಪಂಜಾಬ್‌ನ 13 ಕಡೆ ಬುಧವಾರ ಶೋಧ ನಡೆಸಿದ್ದು ಒಟ್ಟು ₹3.5 ಕೋಟಿ ನಗದನ್ನು ವಶಪಡಿಸಿಕೊಂಡಿದ್ದಾರೆ.

ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಭೋಲಾ ಪ್ರಕರಣದ ತನಿಖೆ ವೇಳೆ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ಕಂಡುಬಂದ ಬಳಿಕ ರೂಪನಗರ ಜಿಲ್ಲೆಯ ಒಟ್ಟು 13 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

ಕುಸ್ತಿಪಟುವೂ ಆದ ಕಾನ್‌ಸ್ಟೇಬಲ್ ಜಗದೀಶ್‌ ಸಿಂಗ್‌ ಅಲಿಯಾಸ್‌ ಭೋಲಾ ಈ ಪ್ರಕರಣದ ಪ್ರಮುಖ ಆರೋಪಿ. ಪಂಜಾಬ್‌ನಲ್ಲಿ 2013– 14ರಲ್ಲಿ ಪತ್ತೆಯಾದ ಬಹುಕೋಟಿ ಮಾದಕ ವಸ್ತು ದಂಧೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣ ಇದಾಗಿದ್ದು ‘ಭೋಲಾ ಡ್ರಗ್ಸ್‌ ಕೇಸ್‌’ ಎಂದು ಕರೆಯಲಾಗುತ್ತದೆ. 

ಭೊಲಾ ಅವರನ್ನು 2014ರಲ್ಲಿ ಇ.ಡಿ ಬಂಧಿಸಿತು. ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ವಿಶೇಷ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT