ಎನ್ಎಸ್ಯುಐನ ಜಂಟಿ ಕಾರ್ಯದರ್ಶಿ ರುಚಿ ಗುಪ್ತಾ ರಾಜಿನಾಮೆ

ನವದೆಹಲಿ:ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ ಎನ್ಎಸ್ಯುಐನ ಜಂಟಿ ಕಾರ್ಯದರ್ಶಿ ರುಚಿ ಗುಪ್ತಾ ತಮ್ಮ ಶನಿವಾರ ರಾಜಿನಾಮೆ ನೀಡಿದ್ದಾರೆ.

ಬಂಡಾಯ ನಾಯಕರ ಜೊತೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಸಭೆ ನಡೆಸುತ್ತಿರುವ ಬೆನ್ನಲೇ ರುಚಿ ಗುಪ್ತಾ ರಾಜಿನಾಮೆ ನೀಡಿದ್ದಾರೆ.

ಪಕ್ಷದಲ್ಲಿ ಸಂಘಟನಾತ್ಮಕ ಮತ್ತು ಸಾಂಸ್ಥಿಕ ಬದಲಾವಣೆಗಳು ಆಗದಿರುವುದಕ್ಕೆ ಬೇಸತ್ತು ರಾಜೀನಾಮೆ ನೀಡಿರುವುದಾಗಿ ರುಚಿ ಗುಪ್ತಾ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.

ಪಕ್ಷದಲ್ಲಿ ನನಗೆ ಉನ್ನತ ಸ್ಥಾನಮಾನ ನೀಡಿದ ರಾಹುಲ್ ಮತ್ತು ಸೋನಿಯಾ ಗಾಂಧಿ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ತುಂಬಾ ನೋವಿನಿಂದ ರಾಜಿನಾಮೆ ನೀಡುತ್ತಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.