ಚಂಡೀಗಢ: ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾದ ಹರಿಯಾಣದ ಐಪಿಎಸ್ ಅಧಿಕಾರಿ ವೈ. ಪವನ್ ಕುಮಾರ್ ಅವರ ಕುಟುಂಬವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಂಗಳವಾರ ಭೇಟಿ ಮಾಡಿದ್ದಾರೆ.

ಇಲ್ಲಿನ ಏರ್ಪೋರ್ಟ್ಗೆ ಬಂದಿಳಿದ ಅವರು, ಬೆಳಿಗ್ಗೆ ಸುಮಾರು 11 ಗಂಟೆಗೆ ಪವನ್ ಅವರ ನಿವಾಸಕ್ಕೆ ತೆರಳಿ ಶ್ರದ್ಧಾಂಜಲಿ ಅರ್ಪಿಸಿದರು.
.ಫ್ಯಾಕ್ಟ್ ಚೆಕ್: ರಾಹುಲ್ ಗಾಂಧಿ I Love Mohammad ಪೋಸ್ಟರ್ ಪ್ರದರ್ಶಿಸಿಲ್ಲ.
ಪವನ್ ಅವರ ಸಾವಿನ ಬಗ್ಗೆ ಹರಿಯಾಣದಲ್ಲಿ ಉಂಟಾಗಿರುವ ವಿವಾದ ನಡುವೆ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ.

2001ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಪವನ್ ಅವರು ಅಕ್ಟೋಬರ್ 7 ರಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
.ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ: ಕೊಲಂಬಿಯಾದಲ್ಲಿ ರಾಹುಲ್ ಗಾಂಧಿ.
52 ವರ್ಷದ ಪವನ್ ಅವರದ್ದು ಎನ್ನಲಾದ 8 ಪುಟಗಳ ಮರಣ ಪತ್ರದಲ್ಲಿ, ಹರಿಯಾಣ ಡಿಜಿಪಿ ಶತ್ರುಜೀತ್ ಕಪೂರ್, ಎಸ್ಪಿ ನರೇಂದ್ರ ಬಜರಂಗಿಯಾ ಸೇರಿ 8 ಹಿರಿಯ ಐಪಿಎಸ್ ಅಧಿಕಾರಿಗಳ ಮೇಲೆ ಜಾತಿ ತಾರತಮ್ಯ, ಮಾನಸಿಕ ಹಿಂಸೆ, ಸಾವರ್ಜನಿಕ ಅವಹೇಳನ ಹಾಗೂ ನಿಂದನೆ ಆರೋಪ ಮಾಡಿದ್ದರು.

ಅವರ ಪತ್ನಿ ಹಿರಿಯ ಐಎಎಸ್ ಅಧಿಕಾರಿ ಅಮ್ನೀತ್ ಕುಮಾರ್ ಪತಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕಪೂರ್ ಮತ್ತು ಬಜರಂಗಿಯಾ ಅವರನ್ನು ಎಫ್ಐಆರ್ನಲ್ಲಿ ಹೆಸರಿಸಬೇಕೆಂದು ಒತ್ತಾಯಿಸಿದ್ದಾರೆ.
.ಸೈದ್ಧಾಂತಿಕವಾಗಿ ಸೋತವರಿಂದ ರಾಹುಲ್ ಗಾಂಧಿ ಬಾಯಿ ಮುಚ್ಚಿಸಲು ಪಿತೂರಿ: ಕಾಂಗ್ರೆಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.