ಚೆನ್ನೈ: ಭಾರತೀಯ ಚುನಾವಣಾ ಆಯೋಗದ ವಿರುದ್ಧ ಮತ ಕಳವು ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸೋಮವಾರ ಬೆಂಬಲ ಘೋಷಿಸಿದ್ದಾರೆ.

ದೇಶದ ಪ್ರಜಾಪ್ರಭುತ್ವವನ್ನು ಬಿಜೆಪಿ ಹಾಡಹಗಲೇ ಹಾಳುಮಾಡುತ್ತಿರುವುದನ್ನು ಮೌನವಾಗಿ ನೋಡಿಕೊಂಡಿರಲು ಸಾಧ್ಯವಿಲ್ಲ. ಆಯೋಗವನ್ನು ಬಿಜೆಪಿ ಚುನಾವಣಾ ಅಕ್ರಮದ ಅಂಗವಾಗಿ ಬಳಸಿಕೊಂಡಿದೆ. ಬೆಂಗಳೂರಿನ ಮಹದೇವಪುರದಲ್ಲಿ ಆಗಿದ್ದು ಆಡಳಿತಾತ್ಮಕ ಲೋಪವಲ್ಲ. ಜನರ ತೀರ್ಪನ್ನು ಕಳವು ಮಾಡುವ ವ್ಯವಸ್ಥಿತ ಪಿತೂರಿ’ ಎಂದಿದ್ದಾರೆ.

‘ನನ್ನ ಸೋದರ ರಾಹುಲ್ ಗಾಂಧಿ ಅವರು ದೊಡ್ಡ ಪ್ರಮಾಣದ ಮತಕಳ್ಳತನವನ್ನು ಬಹಿರಂಗಪಡಿಸಿದ್ದಾರೆ. ಮತದಾರರನ್ನು ಪಟ್ಡಿಯಿಂದ ಕಿತ್ತುಹಾಕುವ ರಾಜಕೀಯ ಪಿತೂರಿಗೆ ಅಂತ್ಯ ಹಾಡಲು ಎಲ್ಲ ರಾಜ್ಯಗಳ ಡಿಜಿಟಲ್ ರೂಪದ ಮತದಾರರ ಪಟ್ಟಿಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ರಾಹುಲ್ ಆರೋಪದ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು’ ಎಂದು ಸ್ಟಾಲಿನ್ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.