ಬಿಹಾರದಲ್ಲಿ ಕಾಂಗ್ರೆಸ್ ಸೋಲಲಿದೆ ಎಂಬುದನ್ನು ರಾಹುಲ್ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವು ಎಂದಿಗೂ ಗೆಲುವು ಸಾಧಿಸುವುದಿಲ್ಲ. ಅವರು ಮಹಾರಾಷ್ಟ್ರದ ಮತದಾರರನ್ನು ಮತ್ತು ಪ್ರಮುಖವಾಗಿ ಮಹಿಳೆಯರನ್ನು ಅವಮಾನಿಸಿದ್ದಾರೆ.
–ದೇವೇಂದ್ರ ಫಡಣವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ
2009 ಮತದಾರರ ಪಟ್ಟಿಯನ್ನು ರಾಹುಲ್ ಅಧ್ಯಯನ ಮಾಡಬೇಕು. ಆಗಿನ ಲೋಕಸಭೆ ಚುನಾವಣೆ ಹೊತ್ತಿಗೆ 7.29 ಕೋಟಿ ಮತದಾರರು ಪಟ್ಟಿಗೆ ಸೇರ್ಪಡೆಗೊಂಡಿದ್ದರು. ವಿಧಾನಸಭೆ ಚುನಾವಣೆ ಹೊತ್ತಿಗೆ ಈ ಸಂಖ್ಯೆಯು 7.59 ಕೋಟಿಯಾಯಿತು. ಆಗ ಕೇಂದ್ರ ಮತ್ತು ರಾಜ್ಯದಲ್ಲಿ ಅವರದ್ದೇ ಸರ್ಕಾರ ಅಧಿಕಾರದಲ್ಲಿತ್ತು. 30 ಲಕ್ಷ ಮತದಾರರು ಹೇಗೆ ಏರಿಕೆಯಾದರು? ಆ ವರ್ಷವೂ ಚುನಾವಣಾ ಆಯೋಗವು ಮನೆ ಮನೆಗೆ ತೆರಳಿ ಮತದಾರರನ್ನು ನೋಂದಾಯಿಸಿಕೊಂಡಿತ್ತು. ಈ ಬಾರಿಯೂ ಆಯೋಗ ಅದನ್ನೇ ಮಾಡಿದೆ. ಸೋಲಿನ ಕರಿನೆರಳಿನಿಂದ ರಾಹುಲ್ ಅವರು ಹೊರಬರದ ಹೊರತೂ ಪಕ್ಷ ಬೆಳವಣಿಗೆ ಕಾಣುವುದಿಲ್ಲ .