ತಮಿಳುನಾಡಿನ ಮದುರೈನ ತಿರುಮಂಗಲಮ್‌ನಲ್ಲಿರುವ ಅರುಳ್ಮಿಗು ಶ್ರೀ ರಜಿನಿ ದೇವಾಲಯದಲ್ಲಿ ನಡೆದ ಪೂಜೆ
ಎಕ್ಸ್ ಚಿತ್ರ
ಮದುರೈ: ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಅಭಿಮಾನಿಯೊಬ್ಬರು ತಿರುಮಂಗಲಮ್‌ನಲ್ಲಿರುವ ತಮ್ಮ ಮನೆಯೊಳಗೆ ಸ್ಥಾಪಿಸಿರುವ ‘ಅರುಳ್ಮಿಗು ಶ್ರೀ ರಜಿನಿ ದೇವಾಲಯ’ದಲ್ಲಿ ತಮಿಳು ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ADVERTISEMENT
ADVERTISEMENT
ಕೆಲ ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡ ಈ ದೇವಾಲಯಲ್ಲಿ 300 ಕೆ.ಜಿ. ತೂಕದ ರಜಿನಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ರಜಿನಿ ಅವರ ಅಭಿಮಾನಿ ಕಾರ್ತಿಕ್ ಹಾಗೂ ಅವರ ಕುಟುಂಬವರ್ಗದವರು ದೇವಾಲಯದಲ್ಲಿ ರಜಿನಿ ಪ್ರತಿಮೆಗೆ ಪೂಜೆ ಸಲ್ಲಿಸಿ, ನಂತರ ಪ್ರಸಾದ ಸಿದ್ಧಪಡಿಸಿ ವಿತರಿಸಿದರು.
‘ರಜಿನಿಕಾಂತ್ ಅವರು ದೇಶಕಂಡ ಅದ್ಭುತ ನಟ. ದೇಶದಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ರಜಿನಿಕಾಂತ್ ಅವರು ಇತ್ತೀಚೆಗೆ ನಮ್ಮನ್ನು ಅವರ ಮನೆಗೆ ಅಹ್ವಾನಿಸಿದ್ದರು. ಇದು ನಮ್ಮ ಜೀವನದಲ್ಲಿ ದೊರೆತ ದೊಡ್ಡ ಅವಕಾಶ. ಅವರು ನಮಗೆ ಬಹಳಷ್ಟು ಉಡುಗೊರೆಗಳನ್ನು ನೀಡಿದರು. ರಜಿನಿ ಪೂಜೆ ಸದಾಕಾಲ ಇದ್ದೇ ಇರುತ್ತದೆ’ ಎಂದು ಕಾರ್ತಿಕ್ ಹೇಳಿದ್ದಾರೆ.
ತಮಿಳು ಹೊಸ ವರ್ಷವನ್ನು ಪುತ್ತಂಡು ಎಂದು ಕರೆಯಲಾಗುತ್ತಿದೆ. ಈಬಾರಿ ಏ. 14ರಂದು ಇದನ್ನು ಆಚರಿಸಲಾಯಿತು.
ADVERTISEMENT
#WATCH | Fans of superstar Rajinikanth offered prayers at Arulmigu Sri Rajini Temple in Thirumangalam, Madurai, on the occasion of Tamil New Year 'Puthandu' today. pic.twitter.com/Zbn35PqrQ1