ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಹ್‌ನಲ್ಲಿ ಸೈನಿಕರೊಂದಿಗೆ ಹೋಳಿ ಆಚರಿಸಿದ ಸಚಿವ ರಾಜನಾಥ್‌ ಸಿಂಗ್‌

Published 24 ಮಾರ್ಚ್ 2024, 13:31 IST
Last Updated 24 ಮಾರ್ಚ್ 2024, 13:31 IST
ಅಕ್ಷರ ಗಾತ್ರ

ಲೇಹ್: ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರು ಇಂದು (ಭಾನುವಾರ) ಲೇಹ್‌ನಲ್ಲಿ ಸೈನಿಕರೊಂದಿಗೆ ಹೋಳಿ ಹಬ್ಬವನ್ನು ಆಚರಿಸಿದರು.

ಹೋಳಿ ಸಂಭ್ರಮದಲ್ಲಿ ಸಚಿವರೊಂದಿಗೆ ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಇದ್ದರು.

ಯೋಧರ ಹಣೆಗೆ ತಿಲಕವನ್ನು ಹಚ್ಚುವ ಮೂಲಕ ಸಿಂಗ್‌ ಹೋಳಿ ಹಬ್ಬವನ್ನು ಆಚರಿಸಿದರು. ನಂತರ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೆಹಲಿ ರಾಷ್ಟ್ರ ರಾಜಧಾನಿಯಾಗಿರುವಂತೆ, ಮುಂಬೈ ಆರ್ಥಿಕ ರಾಜಧಾನಿಯಾಗಿರುವಂತೆ ಲಡಾಖ್‌ ಭಾರತದ ಧೈರ್ಯ ಮತ್ತು ಶೌರ್ಯದ ರಾಜಧಾನಿಯಾಗಿದೆ’ ಎಂದು ಹೇಳಿದರು.

‘ಐದು ವರ್ಷಗಳ ಹಿಂದೆ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗ ಮೊದಲು ಸಿಯಾಚಿನ್‌ಗೆ ಭೇಟಿ ನೀಡಿದ್ದೆ. ಆದರೆ, ಇಂದು ಅಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ. ಅಲ್ಲಿನ ಸೈನಿಕರಿಗೆ ಹೋಳಿ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ’ ಎಂದು ಅವರು ತಿಳಿಸಿದರು.

ಹವಾಮಾನ ವೈಪರೀತ್ಯದಂತಹ ಪರಿಸ್ಥಿತಿಗಳಲ್ಲಿ ಅಚಲವಾದ ಇಚ್ಛಾಶಕ್ತಿ ಮತ್ತು ಧೈರ್ಯದಿಂದ ದೇಶವನ್ನು ಶತ್ರುಗಳಿಂದ ಸೈನಿಕರು ರಕ್ಷಿಸುತ್ತಾರೆ. ಸೈನಿಕರ ಈ ಭಕ್ತಿ ಮತ್ತು ಸೇವೆಗೆ ದೇಶ ಸದಾ ಋಣಿಯಾಗಿರುತ್ತದೆ ಎಂದು ಅವರು ಹೇಳಿದರು.

ನಿಮ್ಮನ್ನು, ನಿಮ್ಮ ಕುಟುಂಬವನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ನೀವು ಈ ದೇಶಕ್ಕಾಗಿ ಉತ್ಸಾಹದಿಂದ ಶ್ರಮಿಸುತ್ತಿರುವ ರೀತಿಯಲ್ಲಿಯೇ ನಮ್ಮ ಸರ್ಕಾರವು (ಬಿಜೆಪಿ) ದೇಶದ ಶಕ್ತಿಗಳಿಗಾಗಿ (ಸೈನಿಕರು) ಯಾವಾಗಲೂ ಕೆಲಸ ಮಾಡುತ್ತದೆ ಎಂದು ಸಿಂಗ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT