ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಂಧ್ರ, ತೆಲಂಗಾಣದಲ್ಲಿ ಪ್ರವಾಹ: ₹5 ಕೋಟಿ ನೆರವು ಘೋಷಿಸಿದ ರಾಮೋಜಿ ಸಮೂಹ

Published 5 ಸೆಪ್ಟೆಂಬರ್ 2024, 6:04 IST
Last Updated 5 ಸೆಪ್ಟೆಂಬರ್ 2024, 6:04 IST
ಅಕ್ಷರ ಗಾತ್ರ

ಹೈದರಾಬಾದ್‌: ಭಾರಿ ಮಳೆಯಿಂದಾಗಿ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಉಂಟಾಗಿರುವ ಪ್ರವಾಹ ಸ್ಥಿತಿಗೆ ರಾಮೋಜಿ ಸಮೂಹ ₹5 ಕೋಟಿ ನೆರವು ನೀಡುವುದಾಗಿ ಘೋಷಿಸಿದೆ. 

‘ಈನಾಡು ಪರಿಹಾರ ನಿಧಿ’ಯಡಿ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದಾಗಿ ಹೇಳಿದೆ.

‘ಈ ಸಂಕಷ್ಟದ ಸಮಯದಲ್ಲಿ ಸಹಾಯ ಕೇಳುತ್ತಿರುವವರ ಕೂಗಿಗೆ ಒಂದು ಸಮುದಾಯವಾಗಿ ಅಗತ್ಯ ಬೆಂಬಲ ನೀಡುವುದು ನಮ್ಮ ಕರ್ತವ್ಯವಾಗಿದೆ. ‘ಈನಾಡು ಪರಿಹಾರ ನಿಧಿ’ಯ ಹಣವನ್ನು ತಕ್ಷಣದ ರಕ್ಷಣಾ ಕಾರ್ಯಾಚರಣೆಗಳಿಗೆ ಮತ್ತು ಸಂತ್ರಸ್ತರ ದೀರ್ಘಾವಧಿಯ ಪುನರ್ವಸತಿಗೆ ಸಮರ್ಪಿಸಲಾಗಿದೆ’ ಎಂದು ರಾಮೋಜಿ ಗ್ರೂಪ್ ಪ್ರಕಟಣೆಯಲ್ಲಿ ತಿಳಿಸಿದೆ.

‘ಈ ಮಾನವೀಯ ಪ್ರಯತ್ನದಲ್ಲಿ ನಮ್ಮೊಂದಿಗೆ ಕೈಜೋಡಿಸಿ ಎಂದು ಪ್ರತಿಯೊಬ್ಬ ವ್ಯಕ್ತಿ ಮತ್ತು ಸಂಸ್ಥೆಯಲ್ಲಿ ಕೇಳಿಕೊಳ್ಳುತ್ತೇವೆ. ಈ ನಾಡು ಪರಿಹಾರ ನಿಧಿಗೆ ಕೊಡುಗೆ ನೀಡಿ. ಇದರಿಂದ ಸಂಸತ್ರಸ್ತರಿಗೆ ಮನೆಗಳನ್ನು ನಿರ್ಮಾಣ ಮಾಡಿ, ಎಲ್ಲವನ್ನೂ ಕಳೆದುಕೊಂಡವರ ಜೀವನದಲ್ಲಿ ಪುನರುಜ್ಜೀವನದ ಭರವಸೆಯನ್ನು ಮೂಡಿಸಬಹುದು’ ಎಂದು ಸಮೂಹ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT