ನವದೆಹಲಿ: ಕೆಂಪು ಕೋಟೆ ಬಳಿ ನವೆಂಬರ್ 10ರಂದು ನಡೆದ ಸ್ಪೋಟದಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆಯಲ್ಲಿ ಗಂಭೀರ ಗಾಯಗೊಂಡು, ಎಲ್ಎನ್ಜೆಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸೋಮವಾರ ಮೃತಪಟ್ಟಿದ್ದಾರೆ.

ಮೃತರನ್ನು ಲುಕ್ಮಾನ್ (50) ಹಾಗೂ ವಿನಯ್ ಪಾಠಕ್ (50) ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.

ಸ್ಫೋಟ ನಡೆದ ಸ್ಥಳದಲ್ಲಿಯೇ 12 ಜನರು ಮೃತಪಟ್ಟಿದ್ದರು. ಘಟನೆಯಲ್ಲಿ ಗಾಯಗೊಂಡಿದ್ದ ಬಿಲಾಲ್ ಎನ್ನುವವರು ಗುರುವಾರ ಮೃತಪಟ್ಟಿದ್ದರು. ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೋಮವಾರ ಮೃತಪಟ್ಟ ಇಬ್ಬರ ಮರಣೋತ್ತರ ಪರೀಕ್ಷೆಯನ್ನು ಶೀಘ್ರವೇ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
.Delhi Red Fort Blast: ಪ್ರಮುಖ ಸಂಚುಕೋರ ಅಮೀರ್ 10 ದಿನ ಎನ್ಐಎ ಕಸ್ಟಡಿಗೆ .Red Fort Blast | ಶಂಕಿತರೊಂದಿಗೆ ನಂಟು: 3ನೇ ಕಾರಿಗಾಗಿ ಮುಂದುವರಿದ ಶೋಧ.Red Fort Blast: ಬಾಂಬ್ ತಯಾರಿಕೆಗೆ ₹ 26 ಲಕ್ಷ ಸಂಗ್ರಹಿಸಿದ್ದ ಆರೋಪಿಗಳು! .Delhi Red fort Blast: ದೇಶದ ನಾಲ್ಕು ನಗರಗಳಲ್ಲಿ ಸರಣಿ ಸ್ಫೋಟ ನಡೆಸಲು ಸಂಚು!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.