ಹೈದರಾಬಾದ್,: ಹಿಂದಿನ ಅವಿಭಜಿತ ಆಂಧ್ರಪ್ರದೇಶದ ಮಾಜಿ ಸಿಎಂ ಕೆ..ರೋಸಯ್ಯ ಅವರ 92ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಶುಕ್ರವಾರ ಇಲ್ಲಿ ಅವರ(ರೋಸಯ್ಯ) ಪ್ರತಿಮೆಯನ್ನು ಅನಾವರಣಗೊಳಿಸಿದರು.

2009ರ ಸೆಪ್ಟೆಂಬರ್ ತಿಂಗಳಲ್ಲಿ ವೈ.ಎಸ್. ರಾಜಶೇಖರ ರೆಡ್ಡಿ ನಿಧನರಾದ ನಂತರ ರೋಸಯ್ಯ ಒಂದು ವರ್ಷಕ್ಕೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಅವಿಭಜಿತ ಆಂಧ್ರಪ್ರದೇಶದ ಕಾಂಗ್ರೆಸ್ ಆಳ್ವಿಕೆಯ ಸಮಯದಲ್ಲಿ ರೋಸಯ್ಯ ಹಣಕಾಸು ಸಚಿವರಾಗಿ 16 ಬಾರಿ ರಾಜ್ಯ ಬಜೆಟ್ ಮಂಡಿಸಿದ್ದರು.

ಕಾಂಗ್ರೆಸ್ ನಾಯಕನ ಸೇವೆಯನ್ನು ಗುರುತಿಸಿ, ರಾಜ್ಯ ಸರ್ಕಾರ ಜುಲೈ 4ರಂದು ಅಧಿಕೃತವಾಗಿ ರೋಸಯ್ಯ ಅವರ ಜನ್ಮ ದಿನಾಚರಣೆಯನ್ನು ಆಯೋಜಿಸಲು ಆದೇಶ ಹೊರಡಿಸಿತ್ತು. 2021ರ ಡಿಸೆಂಬರ್ನಲ್ಲಿ ಅವರು ನಿಧನರಾಗಿದ್ದರು.

ರೋಸಯ್ಯ ತಮ್ಮ 50 ವರ್ಷಗಳ ಸಕ್ರಿಯ ರಾಜಕೀಯ ಜೀವನದಲ್ಲಿ ಯಾವುದೇ ವಿವಾದವಿಲ್ಲದ ರಾಜಕಾರಣಿ ಎನಿಸಿಕೊಂಡಿದ್ದರು. ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ ನಂತರ ತಮಿಳುನಾಡಿನ ರಾಜ್ಯಪಾಲರಾಗಿಯೂ ರೋಸಯ್ಯ ಸೇವೆ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.