ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಸೆವಾಲಾ ತಾಯಿ ಐವಿಎಫ್‌ ಚಿಕಿತ್ಸೆ: ಪ್ರಧಾನ ಕಾರ್ಯದರ್ಶಿಗೆ ನೋಟಿಸ್‌

Published 21 ಮಾರ್ಚ್ 2024, 16:32 IST
Last Updated 21 ಮಾರ್ಚ್ 2024, 16:32 IST
ಅಕ್ಷರ ಗಾತ್ರ

ಚಂಡೀಗಢ: ದಿವಂಗತ ಗಾಯಕ ಸಿಧು ಮೂಸೆವಾಲಾ ಅವರ ತಾಯಿ ಐವಿಎಫ್‌ ಚಿಕಿತ್ಸೆ ಪಡೆದುಕೊಂಡಿರುವ ವಿಷಯವನ್ನು ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ಗಮನಕ್ಕೆ ಏಕೆ ತಂದಿಲ್ಲ ಎಂದು ಪ್ರಶ್ನಿಸಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಜೋಯ್‌ ಶರ್ಮಾ ಅವರಿಗೆ ಪಂಜಾಬ್‌ ಸರ್ಕಾರ ಶೋಕಾಸ್‌ ನೋಟಿಸ್‌ ನೀಡಿದೆ.

‘ಇದು ಗಂಭೀರ ಲೋಪವಾಗಿದ್ದು, ನಿಮ್ಮ ವಿರುದ್ಧ ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮ, 1969ರ ಅಡಿಯಲ್ಲಿ ಏಕೆ ಪ್ರಕ್ರಿಯೆಗಳನ್ನು ಪ್ರಾರಂಭಿಸಬಾರದು. ಈ ಕುರಿತು ಎರಡು ವಾರಗಳಲ್ಲಿ ಕಾರಣ ನೀಡಿ’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

‘ಪಂಜಾಬ್‌ ಸರ್ಕಾರವು ನನ್ನ ಎರಡನೇ ಮಗನ ಜನನದ ಬಗ್ಗೆ ಕಿರುಕುಳ ನೀಡುತ್ತಿದೆ’ ಎಂದು ಸಿಧು ಮೂಸೆವಾಲಾ ಅವರ ತಂದೆ ಬಲಕೌರ್‌ ಸಿಂಗ್ ಅವರು ಆರೋಪಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

‘ಚರಣ್‌ ಕೌರ್‌ (ಸಿಧು ಅವರ ತಾಯಿ) ಅವರ ಐವಿಎಫ್‌ ಚಿಕಿತ್ಸೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಮ್ಮಿಂದ ವರದಿ ಕೇಳಿದೆ. ಈ ಕುರಿತು ನೀವು ನಿಮ್ಮ ಉಸ್ತುವಾರಿ ಸಚಿವರು ಮತ್ತು ಮುಖ್ಯಮಂತ್ರಿಯ ಗಮನಕ್ಕೆ ತಂದು, ಮುಂದಿನ ಕ್ರಮಗಳ ಕುರಿತು ಆದೇಶಗಳನ್ನು ಪಡೆಯಬೇಕಿತ್ತು. ಆದರೆ ನೀವು ಈ ರೀತಿ ಮಾಡದೇ, ಈ ವಿಷಯದಲ್ಲಿ ಕ್ರಮ ತೆಗೆದುಕೊಂಡಿದ್ದೀರಿ’ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT