ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನೀಡಲಾಗಿದ್ದ ₹ 4,500 ಕೋಟಿ ಬಳಕೆ ಮಾಡಿಕೊಳ್ಳದ ರಾಜ್ಯಗಳು

Published 12 ಜೂನ್ 2023, 14:48 IST
Last Updated 12 ಜೂನ್ 2023, 14:48 IST
ಅಕ್ಷರ ಗಾತ್ರ

ನವದೆಹಲಿ: ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಇರುವ ‍‘ಪ್ರಧಾನಮಂತ್ರಿ ಜನ ವಿಕಾಸ ಕಾರ್ಯಕ್ರಮ‘ ಯೋಜನೆಯಡಿ ನೀಡಲಾಗಿದ್ದ ₹ 4500 ಕೋಟಿ ರಾಜ್ಯಗಳ ಬಳಿ ಬಳಕೆಯಾಗದೇ ಉಳಿದಿವೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.

2008 ರಿಂದ 2018–19ರ ಅವಧಿಯಲ್ಲಿ ಈ ಯೋಜನೆಯಡಿ ಮೂಲಸೌಕರ್ಯ ಅಭಿವೃದ್ಧಿಗೆ ಬಿಡುಗಡೆಯಾದ 58,000 ಘಟಕಗಳು ಕಾರ್ಯಸಾಧುವಲ್ಲ ಎಂದು ರಾಜ್ಯ ಸರ್ಕಾರಗಳು ಹೇಳಿದ್ದು, ಹೀಗಾಗಿ ಅವುಗಳನ್ನು ಒಂದೋ ಕೈ ಬಿಡಲಾಗಿದೆ ಅಥವಾ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಯೋಜನೆಯಡಿ ಬಿಡುಗಡೆಯಾಗುವ ಅನುದಾನವನ್ನು ಬಳಕೆ ಮಾಡಿ, ರಾಜ್ಯ ಸರ್ಕಾರಗಳು ‘ಬಳಕೆ ಪ್ರಮಾಣಪತ್ರ‘ ನೀಡದ ಹೊರತು, ಕೇಂದ್ರ ಸರ್ಕಾರಕ್ಕೆ ಈ ಯೋಜನೆಯಡಿ ಹೆಚ್ಚಿನ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಯುಪಿಎ ಅವಧಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ₹ 12,000 ಕೋಟಿ ಹಾಗೂ ಪ್ರಧಾನಿ ಮೋದಿ ಅವರ 9 ವರ್ಷದ ಅವಧಿಯಲ್ಲಿ ₹ 31,000 ಕೋಟಿ ಖರ್ಚು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಇರುವ ಕೇಂದ್ರ ಸರ್ಕಾರದ ಯೋಜನೆ ಇದಾಗಿದ್ದು, ಈ ಯೋಜನೆಯಡಿ ‍ಆಯ್ದ ಪ‍್ರದೇಶಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ‍ಮಾಡಲಾಗುತ್ತದೆ. 2018ರಲ್ಲಿ ಈ ಯೋಜನೆಗೆ ಹೊಸ ರೂಪ ಕೊಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT