ನವದೆಹಲಿ: ’ಹಿಂದೂ ರಾಷ್ಟ್ರೀಯವಾದಿ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್ಎಸ್ಎಸ್) ಸಮಾಜದ ವಿವಿಧ ವರ್ಗಗಳೊಂದಿಗೆ ‘ದೇಶ ಮೊದಲು‘ ಎಂಬ ತತ್ವದ ಆಧಾರದ ಮೇಲೆ ಕೆಲಸ ಮಾಡುತ್ತದೆ. ಆದರೆ, ಎಂದಿಗೂ ವಿರೋಧಾಭಾಸಗಳನ್ನು ಎದುರಿಸುವಂತೆ ಸನ್ನಿವೇಶ ಎದುರಾಗಿಲ್ಲ‘ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಜಯದಶಮಿ ದಿನವಾದ ಇಂದು (ಬುಧವಾರ) ಆರ್ಎಸ್ಎಸ್ ಸ್ಥಾಪನೆಯಾಗಿ 100 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ‘ಸಂಘದ ಸ್ವಯಂಸೇವಕರು ರಾಷ್ಟ್ರ ಸೇವೆ ಮತ್ತು ಸಮಾಜವನ್ನು ಸಬಲೀಕರಣಗೊಳಿಸಲು ದಣಿವರಿಯಿಲ್ಲದೆ ಸಮರ್ಪಿತರಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಇಂದು ಬಿಡುಗಡೆಯಾದ ಅಂಚೆ ಚೀಟಿಯು 1963ರ ಗಣರಾಜ್ಯೋತ್ಸವದ ಸಮಾರಂಭದಲ್ಲಿ ಹೆಮ್ಮೆಯಿಂದ ಮೆರವಣಿಗೆ ನಡೆಸಿದ ಆರ್ಎಸ್ಎಸ್ ಸ್ವಯಂಸೇವಕರನ್ನು ನೆನಪಿಸುತ್ತದೆ’ ಎಂದು ಅವರು ತಿಳಿಸಿದ್ದಾರೆ.

ಆರ್ಎಸ್ಎಸ್, ದೇಶದ ಬಹುತೇಕ ರಾಜ್ಯ, ಜಿಲ್ಲೆ, ತಾಲ್ಲೂಕು, ಹೋಬಳಿಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಸಂಘದ ಸದಸ್ಯರಿಗೆ ನಿಗದಿತವಾಗಿ ಸ್ವಯಂ ರಕ್ಷಣೆ ಸೇರಿದಂತೆ ವಿವಿಧ ರೀತಿಯ ತರಬೇತಿ, ಸೈದ್ಧಾಂತಿಕ ಶಿಕ್ಷಣ ನೀಡಲಾಗುತ್ತದೆ. ದೇಶದಲ್ಲಿ ಒಟ್ಟು 83,000 ಶಾಖೆಗಳಿವೆ ಎನ್ನಲಾಗುತ್ತಿದ್ದು, ಅವುಗಳಲ್ಲಿ ಹಿಂದುತ್ವ, ಹಿಂದೂ ರಾಷ್ಟ್ರೀಯತೆಯನ್ನು ಕೇಂದ್ರೀಕರಿಸಿ ನಿರಂತರ ಚಟುವಟಿಕೆಗಳನ್ನು ನಡೆಸಲಾಗುತ್ತದೆ.

ಸರಸಂಘಚಾಲಕ, ಸಂಘದ ಪರಮೋಚ್ಚ ಸ್ಥಾನ ಪಡೆದಿದ್ದರೆ, ನಂತರದ ಸ್ಥಾನದಲ್ಲಿ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ಇರುತ್ತಾರೆ. ಪ್ರಸ್ತುತ ಮೋಹನ ಭಾಗವತ್ ಅವರು ಸರಸಂಘಚಾಲಕರಾಗಿದ್ದರೆ, ದತ್ತಾತ್ರೇಯ ಹೊಸಬಾಳೆ ಅವರು ಸರಕಾರ್ಯವಾಹ ಆಗಿದ್ದಾರೆ.
.ಆಳ–ಅಗಲ | RSS History: ಆರ್ಎಸ್ಎಸ್ @100.RSSಗೆ 100 ವರ್ಷ: ಅಭೂತಪೂರ್ವ, ಸ್ಪೂರ್ತಿದಾಯಕ ಪ್ರಯಾಣ ಎಂದು ಮೋದಿ ಶ್ಲಾಘನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.