ಲಂಡನ್: ಇಂಗ್ಲೆಂಡ್‌ನಲ್ಲಿ ‘ಆರು ಜನರ’ ನಿಯಮವನ್ನು ಸೋಮವಾರದಿಂದ ಜಾರಿಗೆ ತರಲಾಗಿದೆ. ಈ ನಿಯಮ ಉಲ್ಲಂಘಿಸಿ 6 ಮಂದಿಗಿಂತ ಹೆಚ್ಚು ಜನರು ಸೇರಿದರೆ ಅವರ ವಿರುದ್ಧ 100 ಪೌಂಡ್ಸ್(₹9,449) ದಂಡ ವಿಧಿಸಲಾಗುತ್ತದೆ.

ಕಳೆದ ವಾರ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಹೀಗಾಗಿ, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ‘ಆರು ಜನರ’ ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ.

‘ಕೊರೊನಾದ ವಿರುದ್ಧ ಹೋರಾಡಲು ನಾವೆಲ್ಲರು ಹಲವು ತ್ಯಾಗಗಳನ್ನು ಮಾಡಿದ್ದೇವೆ. ಇದೀಗ ಮತ್ತೆ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಹಾಗಾಗಿ ಸೋಂಕಿನ ಪ್ರಸರಣ ನಿಯಂತ್ರಿಸಲು ನಾವು ಇನ್ನಷ್ಟು ತ್ಯಾಗಗಳನ್ನು ಮಾಡಬೇಕಾಗುತ್ತದೆ’ ಎಂದು ಬ್ರಿಟನ್‌ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರು ಹೇಳಿದ್ದಾರೆ.

‘ಸೋಮವಾರದಿಂದ ‘ಆರು ಜನರ’ ಹೊಸ ನಿಯಮ ಜಾರಿಗೆ ಬರಲಿದೆ. ಇದನ್ನು ಉಲ್ಲಂಘಿಸಿದರೆ ಪೊಲೀಸರು ದಂಡ ವಿಧಿಸುತ್ತಾರೆ. ಹಾಗಾಗಿ ಜನರು ಮನೆಯೊಳಗೆ ಮತ್ತು ಹೊರಗಡೆ ಆರು ಜನರಿಗಿಂತ ಹೆಚ್ಚು ಮಂದಿ ಸೇರಬಾರದು’ ಎಂದು ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.