ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಧನ: ‘ಸುಪ್ರೀಂ’ ತೀರ್ಪಿನಿಂದ ಭಾರಿ ಆರ್ಥಿಕ ಹೊರೆ ಆತಂಕ

Published : 14 ಆಗಸ್ಟ್ 2024, 15:32 IST
Last Updated : 14 ಆಗಸ್ಟ್ 2024, 15:32 IST
ಫಾಲೋ ಮಾಡಿ
Comments

ನವದೆಹಲಿ: ಗಣಿಗಾರಿಕೆ ಮತ್ತು ಖನಿಜಗಳಿರುವ ಜಮೀನುಗಳಿಗೆ ಸಂಬಂಧಿಸಿದ ತೆರಿಗೆ ಮತ್ತು ರಾಯಧಾನ ಕುರಿತ ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಗಣಿಗಾರಿಕೆ ಉದ್ಯಮದ ಮೇಲೆ ಭಾರಿ ಪ್ರಮಾಣದ ಆರ್ಥಿಕ ಹೊರೆ ಬೀಳಲಿದೆ ಎಂಬ ಆತಂಕ ಬುಧವಾರ ವ್ಯಕ್ತವಾಗಿದೆ.

ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ, ರಾಜ್ಯಗಳಿಗೆ ಪಾವತಿಬೇಕಾದ ಬಾಕಿ ತೆರಿಗೆ ಮತ್ತು ರಾಯಧನದ ಮೊತ್ತ  ₹1.5 ಲಕ್ಷ ಕೋಟಿಯಿಂದ ₹ 2 ಲಕ್ಷ ಕೋಟಿಯಷ್ಟಾಗಬಹುದು ಎಂದು ಅಂದಾಜು ಈ ಆತಂಕಕ್ಕೆ ಕಾರಣ.

‘ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಗಣಿಗಾರಿಕೆ, ಉಕ್ಕು, ಇಂಧನ ಹಾಗೂ ಕಲ್ಲಿದ್ದಲು ಕಂಪನಿಗಳ ಮೇಲೆ ಭಾರಿ ಪ್ರಮಾಣದ ಆರ್ಥಿಕ ಹೊರೆ ಬೀಳುವುದು. ಈ ಕ್ಷೇತ್ರಗಳಲ್ಲಿ ಕಾರ್ಯಾಚರಣೆ ನಿರತ ಕಂಪನಿಗಳ ಹೂಡಿಕೆ ಮೇಲೂ ಅಗಾಧ ಪರಿಣಾಮ ಬೀರಲಿದೆ’ ಎಂದು ಗಣಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಜಾಗತಿಕ ಮಟ್ಟದಲ್ಲಿ ಗರಿಷ್ಠ ತೆರಿಗೆ ವಿಧಿಸಲಾಗುತ್ತಿರುವ ಕಾರಣ ಗಣಿಗಾರಿಕೆ ಕ್ಷೇತ್ರ ಈಗಾಗಲೇ ತತ್ತರಿಸಿದೆ. ವಿವಿಧ ತೆರಿಗೆಗಳನ್ನು ವಿಧಿಸುವುದಕ್ಕೆ ಸುಪ್ರೀಂ ಕೋರ್ಟ್‌ನ ಜುಲೈ 25ರ ತೀರ್ಪು ರಾಜ್ಯಗಳಿಗೆ ಅಂಕೆಯಿಲ್ಲದ ಅಧಿಕಾರ ನೀಡಲಿದೆ’ ಎಂದು ಭಾರತೀಯ ಗಣಿ ಕೈಗಾರಿಕೆಗಳ ಒಕ್ಕೂಟ (ಎಫ್‌ಐಎಂಐ)ದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಭಾಟಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಣಿಗಾರಿಕೆ ಕ್ಷೇತ್ರದ ಸಮಸ್ಯೆಗಳ ಗಂಭೀರತೆಯನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಸಮಸ್ಯೆ ಪರಿಹಾರಕ್ಕೆ ಕೇಂದ್ರ ತುರ್ತು ಕ್ರಮ ಕೈಗೊಳ್ಳಬೇಕು
ಬಿ.ಕೆ.ಭಾಟಿಯಾ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಎಫ್‌ಐಎಂಐ

Quote -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT