ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

500 ಉಗ್ರರು ನುಸುಳುವ ಮುನ್ಸೂಚನೆ: ದಾಳಿಗೆ ಸಿದ್ಧವಿರಲು ಸೈನಿಕರಿಗೆ ಸೇನೆ ಸೂಚನೆ

ಫಾಲೋ ಮಾಡಿ
Comments

ನವದೆಹಲಿ: ಭಾರತದೊಳಗೆ ನುಗ್ಗಿ ಅಶಾಂತಿ ಸೃಷ್ಟಿಸುವ ಸಲುವಾಗಿ ಪಾಕಿಸ್ತಾನದ ಉಗ್ರರ ಅಡುಗುದಾಣಗಳಲ್ಲಿ 450–500 ಭಯೋತ್ಪಾದಕರು ಸನ್ನದ್ದ ಸ್ಥಿತಿಯಲ್ಲಿರುವ ಬಗ್ಗೆ ಭಾರತಕ್ಕೆ ಮಾಹಿತಿ ಸಿಕ್ಕಿದ್ದು, ಗಡಿ ನಿಯಂತ್ರಣ ರೇಖೆಯಲ್ಲಿ ಯಾವುದೇ ಕ್ಷಣದಲ್ಲಿ ಎಂಥದ್ದೇ ಕಾರ್ಯಾಚರಣೆ ನಡೆಸಲು ಭಾರತೀಯ ಸೈನಿಕರಿಗೆ ಸೂಚನೆ ನೀಡಲಾಗಿದೆ.

ತರಬೇತಿ ಪಡೆದ ಉಗ್ರರ ತಂಡಗಳು ಭಾರತದ ಒಳಗೆ ನುಸುಳಲು ಬಾಲಾಕೋಟ್‌ನಲ್ಲಿ ಹೊಂಚು ಹಾಕಿ ಕುಳಿತಿವೆ ಎಂದು ಭಾರತಕ್ಕೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.

ಸೋಮವಾರ ಇದೇ ವಿಷಯವಾಗಿ ಮಾತನಾಡಿದ್ದ ಭಾರತೀಯ ಸೇನೆ ಮುಖ್ಯಸ್ಥ ಬಿಪಿನ್‌ ರಾವತ್‌, ‘ಭಾರತೀಯ ಸೇನೆ ದಾಳಿ ಮಾಡಿ ನಾಶ ಮಾಡಿದ್ದ ಬಾಲಾಕೋಟ್‌ ಪ್ರದೇಶವನ್ನು ಪಾಕಿಸ್ತಾನ ಮತ್ತೆ ಸಕ್ರಿಯಗೊಳಿಸಿದೆ,’ ಎಂದು ಹೇಳಿದ್ದರು.

ಪಾಕಿಸ್ತಾನದ ಲಿಪಾ ಕಣಿವೆಗಳಲ್ಲಿರುವ ಅಡಗುದಾಣಗಳಲ್ಲಿ ಭಯೋತ್ಪಾದಕರು ಅವಿತುಕುಳಿತಿದ್ದಾರೆ. ಸೂಚನೆಗಾಗಿ ಕಾಯುತ್ತಿರುವ ಅವರು ಯಾವಾಗಬೇಕಾದರೂ ಭಾರತದ ಒಳಗೆ ನುಸುಳಿ ವಿಧ್ವಂಸಕ ಕೃತ್ಯವೆಸಗಬಹುದು. ಭಾರತದ ಪ್ರಮುಖ ನಗರಗಳು, ಕಟ್ಟಡಗಳ ಮೇಲೆ ದಾಳಿ ಮಾಡಲು ಯೋಜನೆ ರೂಪಿಸಿದ್ದಾರೆ ಎಂಬ ಮಾಹಿತಿ ಭಾರತಕ್ಕೆ ಲಭ್ಯವಾಗಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT