ನವದೆಹಲಿ: ನೇಪಾಳದ ಅಸ್ಥಿರತೆ ಬಗ್ಗೆ ‘ನಮ್ಮ ನೆರೆಯ ದೇಶದಲ್ಲಿ ಏನಾಗುತ್ತಿದೆ ನೋಡಿ’ ಎಂದಿರುವ ಸುಪ್ರೀಂ ಕೋರ್ಟ್, ಇದೇ ವೇಳೆ ಭಾರತದ ಸಂವಿಧಾನದ ಚೌಕಟ್ಟಿನ ಸ್ಥಿರತೆ ಮತ್ತು ಘನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಶ್ಲಾಘಿಸಿದೆ.

ರಾಜ್ಯ ವಿಧಾನ ಮಂಡಲದಲ್ಲಿ ಅಂಗೀಕರಿಸಿದ ಮಸೂದೆಗಳನ್ನು ಅನುಮೋದಿಸಲು, ಸಮಯ ನಿಗದಿಪಡಿಸುವ ಕುರಿತು ರಾಷ್ಟ್ರಪತಿಗಳ ಉಲ್ಲೇಖದ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ನಡೆದ ವಿಚಾರಣೆ ವೇಳೆ, ಬಿ.ಆರ್. ಗವಾಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

‘ನಮ್ಮ ಸಂವಿಧಾನದ ಬಗ್ಗೆ ನಮಗೆ ಹೆಮ್ಮೆ ಇದೆ. ನೋಡಿ, ನಮ್ಮ ನೆರೆಯ ದೇಶದಲ್ಲಿ ಏನಾಗುತ್ತಿದೆ. ನೇಪಾಳದಲ್ಲಿ ಏನಾಯಿತು ಎನ್ನುವುದನ್ನೂ ನಾವು ನೋಡಿದ್ದೇವೆ’ ಎಂದು ಸಿಜೆಐ ಗವಾಯಿ ಹೇಳಿದರು.

‘ನೆರೆಯ ದೇಶ ಬಾಂಗ್ಲಾದೇಶದಲ್ಲಿ ಮುಂದುವರಿದಿರುವ ಉದ್ವಿಗ್ನತೆ ಮತ್ತು ಕಳೆದ ವರ್ಷ ಅಲ್ಲಿ ನಡೆದ ಗಲಭೆಯನ್ನು ನ್ಯಾಯಮೂರ್ತಿ ವಿಕ್ರಮ್ ಉಲ್ಲೇಖಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.