ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಸೇನೆಯಲ್ಲಿ ‘ಸಿಲುಕಿದ್ದ’ ಹಲವು ಭಾರತೀಯರ ಬಿಡುಗಡೆ –ಕೇಂದ್ರ

Published 26 ಫೆಬ್ರುವರಿ 2024, 15:46 IST
Last Updated 26 ಫೆಬ್ರುವರಿ 2024, 15:46 IST
ಅಕ್ಷರ ಗಾತ್ರ

ನವದೆಹಲಿ : ಭಾರತದ ಒತ್ತಡದ ಹಿಂದೆಯೇ ರಷ್ಯಾದ ಸೇನೆಗೆ ಸಹಾಯಕ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಲವು ಭಾರತೀಯರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ‘ಭಾರತೀಯರ ತ್ವರಿತ ಬಿಡುಗಡೆ ಬೇಡಿಕೆಯನ್ನು ಸರ್ಕಾರ ಆದ್ಯತೆಯಾಗಿ ಪರಿಗಣಿಸಿದ್ದು, ಈ ನಿಟ್ಟಿನಲ್ಲಿ ಸಕ್ರಿಯವಾಗಿದೆ‘ ಎಂದು ಸ್ಪಷ್ಟಪಡಿಸಿದೆ.

ಮಾಧ್ಯಮ ವರದಿಗಳ ಪ್ರಕಾರರ, ರಷ್ಯಾ ಸೇನೆಯಲ್ಲಿ ಭದ್ರತಾ ಸಹಾಯಕರಾಗಿ ಹಲವು ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಇವರ ಮೇಲೆ ಯೋಧರಾಗಿ ಯುದ್ಧದಲ್ಲಿ ಸೆಣಸುವಂತೆಯೂ ಒತ್ತಡ ಹೇರಲಾಗುತ್ತಿದೆ.

ರಷ್ಯಾ ಸೇನೆಯಲ್ಲಿ ಭಾರತೀಯರು ಕೆಲಸ ಮಾಡುತ್ತಿರುವ ಕುರಿತು ನಾವು ಮಾಧ್ಯಮಗಳಲ್ಲಿ ಅಸ್ಪಷ್ಟ ವರದಿಗಳನ್ನು ಗಮನಿಸಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಇಂತಹ ಪ್ರಕರಣಗಳನ್ನು ಮಾಸ್ಕೊದಲ್ಲಿನ ಭಾರತದ ರಾಯಭಾರ ಕಚೇರಿ ಗಮನಕ್ಕೆ ತರಲಾಗಿದೆ. ಆ ಮೂಲಕ ರಷ್ಯಾ ಸರ್ಕಾರದ ಜೊತೆ ಚರ್ಚಿಸುತ್ತಿದ್ದು, ನವದೆಹಲಿಯ ರಷ್ಯಾ ರಾಯಭಾರ ಕಚೇರಿ ಗಮನವನ್ನು ಸೆಳೆಯಲಾಗಿದೆ ಎಂದಿದೆ.

ಇಂತಹ ಮಾತುಕತೆಗಳ ಪರಿಣಾಮವಾಗಿ ರಷ್ಯಾ ಸೇನೆಯಲ್ಲಿ ಸಿಲುಕಿದ್ದ ಹಲವು ಭಾರತೀಯರು ಈಗಾಗಲೇ ಬಿಡುಗಡೆಗೊಂಡಿದ್ದಾರೆ ಎಂದು ಸಚಿವಾಲಯವು ತಿಳಿಸಿದೆ.

ಈ ಸಂಬಂಧ ಕಳೆದ ವಾರ ಪ್ರತಿಕ್ರಿಯಿಸಿದ್ದ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ‘ಇಂತಹ ಬಿಕ್ಕಟ್ಟುಗಳಿಂದ ಆದಷ್ಟು ದೂರ ಇರಬೇಕು’ ಎಂದು ಭಾರತೀಯ ಪ್ರಜೆಗಳಿಗೆ ಮನವಿ ಮಾಡಿದ್ದರು. 

ಭಾರತೀಯ ತ್ವರಿತ ಬಿಡುಗಡೆಗೆ ಕ್ರಮವಹಿಸಬೇಕು ಎಂದು ಎಐಎಂಐಎಂ ನಾಯಕ ಅಸಾದುದ್ದೀನ್‌ ಒವೈಸಿ ಅವರು ಈ ಮೊದಲು ಆಗ್ರಹಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT