ನವದೆಹಲಿ: ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕು, ಅದು 9ನೇ ತರಗತಿಯಿಂದ ಆರಂಭವಾಗಬಾರದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಅಲೋಕ್ ಅರಾಧೆ ಅವರಿದ್ದ ದ್ವಿಸದಸ್ಯ ಪೀಠ ಈ ಅಭಿಪ್ರಾಯಪಟ್ಟಿದೆ.

ಲೈಂಗಿಕ ಶಿಕ್ಷಣ ಪ್ರೌಢಶಾಲಾ ಪಠ್ಯಕ್ರಮದ ಭಾಗವಾಗಬೇಕು, ಇದರಿಂದ ಯವೌನಕ್ಕೆ ಕಾಲಿಟ್ಟ ಹರೆಯದವರು ತಮ್ಮ ದೇಹದಲ್ಲಿ ಉಂಟಾಗುವ ಹಾರ್ಮೋನ್ಗಳ ಬದಲಾವಣೆ ಬಗ್ಗೆ ಅರಿವು ಹೊಂದಿದಂತಾಗುತ್ತದೆ.

ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಲೈಂಗಿಕ ಶಿಕ್ಷಣ ನೀಡಬೇಕು, 9ನೇ ತರಗತಿಯಿಂದ ಆರಂಭವಾಗಬಾರದು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಆಲೋಚಿಸಿ, ಅಗತ್ಯ ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳಬೇಕು, ಹೀಗಾಗಿ ಮಕ್ಕಳಿಗೆ ಯೌವನದ ಬಳಿಕ ನಡೆಯುವ ದೇಹದ ಬದಲಾವಣೆಗಳು ಹಾಗೂ ಸಂಬಂಧಿತ ಮುಂಜಾಗ್ರತೆ ಬಗ್ಗೆ ತಿಳುವಳಿಕೆ ಸಿಗಲಿ ಎಂದು ಪೀಠ ತಿಳಿಸಿದೆ.

ಅತ್ಯಾಚಾರ ಪ್ರಕರಣದಲ್ಲಿ 15 ವರ್ಷದ ಬಾಲಕನಿಗೆ ಜಾಮೀನು ನೀಡುವ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಬಾಲಕನಿಗೆ ಷರತ್ತುಗಳ ಮೇಲೆ ಜಾಮೀನು ನೀಡುವಂತೆ ಕೋರ್ಟ್ ನಿರ್ದೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.