ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನನ ಲಿಂಗಾನುಪಾತ: 2022-23ರಲ್ಲಿ 15 ಅಂಶಗಳಷ್ಟು ಏರಿಕೆ– ಕೇಂದ್ರ ಸರ್ಕಾರ

Published : 28 ಜುಲೈ 2023, 12:36 IST
Last Updated : 28 ಜುಲೈ 2023, 12:36 IST
ಫಾಲೋ ಮಾಡಿ
Comments

ನವದೆಹಲಿ: ದೇಶದಲ್ಲಿ 2014-15ರಲ್ಲಿ 1,000 ಗಂಡು ಮಕ್ಕಳಿಗೆ 918 ರಷ್ಟಿದ್ದ ಹೆಣ್ಣುಮಕ್ಕಳ ಜನನದ ಲಿಂಗಾನುಪಾತ 2022-23ರ ಅವಧಿಯಲಿ 15 ಅಂಶಗಳಷ್ಟು ಏರಿಕೆ ಕಂಡು 933ಕ್ಕೆ ಮುಟ್ಟಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಶುಕ್ರವಾರ ಲೋಕಸಭೆಗೆ ತಿಳಿಸಿದರು.

ಸಂಸತ್ತಿನ ಕೆಳಮನೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು, 'ಬೇಟಿ ಬಚಾ ಬೇಟಿ ಪಢಾವೊ' ಯೋಜನೆಯು ಹೆಣ್ಣು ಮಗುವಿನ ಹಕ್ಕುಗಳನ್ನು ಅಂಗೀಕರಿಸಲು ಸಾರ್ವಜನಿಕರಲ್ಲಿ ಸಾಮೂಹಿಕ ಪ್ರಜ್ಞೆಯನ್ನು ಹುಟ್ಟುಹಾಕಿದೆ ಎಂದು ಹೇಳಿದ್ದಾರೆ.

‘ಈ ಯೋಜನೆಯ ಮೂಲಕ ಭಾರತದಲ್ಲಿ ಸಿಎಸ್ಆರ್ (ಮಕ್ಕಳ ಲಿಂಗ ಅನುಪಾತ) ಕುಸಿಯುತ್ತಿರುವ ಸಮಸ್ಯೆಯ ಬಗ್ಗೆ ಕಾಳಜಿ ವಹಿಸಲಾಗಿದೆ. ಅದರ ಪರಿಣಾಮ, 2014ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 918ರಷ್ಟಿದ್ದ ಜನನದ ಲಿಂಗಾನುಪಾತ (ಎಸ್‌ಆರ್‌ಬಿ) 2022-23ರಲ್ಲಿ 15 ಅಂಶಗಳಷ್ಟು ಏರಿಕೆ ಕಂಡು 933ಕ್ಕೆ ಮುಟ್ಟಿದೆ’ ಎಂದು ಅವರು ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಜನನದ ಲಿಂಗಾನುಪಾತವು, ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಜನಿಸಿದ ಹೆಣ್ಣು ಮತ್ತು ಗಂಡು ಮಕ್ಕಳ ಜನನಗಳ ಸಂಖ್ಯೆಯ ಅನುಪಾತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT