ಜಲ್ನಾ: ‘ಮಹಾರಾಷ್ಟ್ರದಲ್ಲಿ ಸಾಮಾಜಿಕ ಅಸಮಾನತೆ ಸೃಷ್ಟಿಗೆ ಎನ್ಸಿಪಿ (ಎಸ್ಪಿ) ವರಿಷ್ಠ ಶರದ್ ಪವಾರ್ ಅವರೇ ಕಾರಣ’ ಎಂದು ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಆರೋಪಿಸಿದರು.

ಮರಾಠ ಮೀಸಲಾತಿ ಕುರಿತ ರಾಜ್ಯ ಸಚಿವ ಸಂಪುಟ ಉಪ ಸಮಿತಿಯ ಮುಖ್ಯಸ್ಥರೂ ಆಗಿರುವ ಸಚಿವ ಪಾಟೀಲ್ ಅವರು ಶರದ್ ಪವಾರ್ ವಿರುದ್ಧ ಗುರುವಾರ ರಾತ್ರಿ ವಾಗ್ದಾಳಿ ನಡೆಸಿದರು.

‘ಪವಾರ್ ಅವರು ಮುಖ್ಯಮಂತ್ರಿ ಆಗಿದ್ದಾಗ 1994ರಲ್ಲಿ ಮಂಡಲ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವಾಗ ಮರಾಠ ಸಮುದಾಯವನ್ನು ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಸೇರಿಸಿದ್ದರೆ, ಪ್ರಸ್ತುತ ಮೀಸಲಾತಿ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ’ ಎಂದರು.

‘ಶರದ್ ಪವಾರ್ ಅವರೇ ಈ ವಿಷಯದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

ಜಲ್ನಾದ ಅಂತರವಾಲಿ ಸರಾಟಿ ಗ್ರಾಮದಲ್ಲಿ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಅವರೊಂದಿಗೆ ಸಚಿವರು ಗೋಪ್ಯ ಸಭೆ ನಡೆಸಿದರು.

‘ಜರಾಂಗೆ ಆರೋಗ್ಯ ವಿಚಾರಿಸಲು ಇಲ್ಲಿಗೆ ಬಂದಿರುವೆ. ಇದು ವೈಯಕ್ತಿಕ ಭೇಟಿ’ ಎಂದು ಪಾಟೀಲ್ ಪತ್ರಕರ್ತರಿಗೆ ತಿಳಿಸಿದರು.

‘ಮರಾಠ ಮೀಸಲಾತಿಯನ್ನು ಒಬಿಸಿ ನಾಯಕರು ಒಪ್ಪಿಕೊಳ್ಳಬೇಕು’ ಎಂದ ಪಾಟೀಲ್, ಸಚಿವ ಛಗನ್ ಭುಜಬಲ್ ಇದಕ್ಕೆ ವಿರೋಧಿಸಬಾರದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.