ಮೆಲ್ಬರ್ನ್: ವಿಶ್ವದರ್ಜೆಯ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರೊಂದಿಗೆ ಮೈದಾನದಲ್ಲಿ ಆಡಲು ಕಾತರದಿಂದ ಕಾಯುತ್ತಿದ್ದೇನೆ ಎಂದು ಆಸ್ಟ್ರೇಲಿಯಾದ ಉದಯೋನ್ಮುಖ ಆಟಗಾರ ಕೂಪರ್ ಕಾನೊಲಿ ಹೇಳಿದ್ದಾರೆ.

‘ರೋಹಿತ್ ಹಾಗೂ ಕೊಹ್ಲಿ ಅವರ ಜೊತೆ ಈ ಹಿಂದೆಯೂ ಆಡಿದ್ದೇನೆ. ಆದರೆ, ಅವರೊಂದಿಗೆ ಕೊನೆಯ ಬಾರಿಗೆ ಮೈದಾನ ಹಂಚಿಕೊಳ್ಳುವುದು ಗೌರವದ ವಿಷಯ ಎಂದೇ ಭಾವಿಸಿರುವೆ’ ಎಂದು ಕಾನೊಲಿ ಅವರು ‘ದಿ ವೆಸ್ಟ್ ಆಸ್ಟ್ರೇಲಿಯಾ’ ಪತ್ರಿಕೆಯ ಸಂದರ್ಶನದಲ್ಲಿ ಹೇಳಿದ್ದಾರೆ.

‘ಈ ಸರಣಿಯ ಪ್ರಮುಖ ಆಕರ್ಷಣೆಯೇ ಈ ಇಬ್ಬರು ಆಟಗಾರರು. ಅವರ ಆಟ ಕಣ್ತುಂಬಿಕೊಳ್ಳಲು ಬಹಳಷ್ಟು ಅಭಿಮಾನಿಗಳು ಕ್ರೀಡಾಂಗಣದಲ್ಲಿ ಜಮಾಯಿಸಲಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಟಿ–20 ಮತ್ತು ಟೆಸ್ಟ್ ಮಾದರಿಗೆ ವಿದಾಯ ಹೇಳಿರುವ ರೋಹಿತ್ ಮತ್ತು ಕೊಹ್ಲಿ ಅವರು ಆಸ್ಟ್ರೇಲಿಯಾ ಎದುರು ಇದೇ 19ರಂದು ಆರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.