ನವದೆಹಲಿ: ‘ಪತ್ರಿಕೆಗಳ ಪಿಡಿಎಫ್ ಪ್ರತಿಗಳನ್ನು ಅಥವಾ ಡಿಜಿಟಲ್ ಆವೃತ್ತಿಯ ಅಂಶಗಳನ್ನು, ಮಾಲೀಕರ ಒಪ್ಪಿಗೆ ಇಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆ ಮಾಡುವುದು ಕೃತಿಸ್ವಾಮ್ಯ ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಉಲ್ಲಂಘನೆಯಾಗುತ್ತದೆ’ ಎಂದು ಸುಪ್ರೀಂ ಕೋರ್ಟ್ ವಕೀಲ ಪವನ್ ದುಗ್ಗಲ್ ಹೇಳಿದ್ದಾರೆ.

ಇಂಥ ಕೃತ್ಯವು ಓದುಗರನ್ನು ತಪ್ಪು ಮಾಹಿತಿ ಅಥವಾ ತಿರುಚಿದ ಮಾಹಿತಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ. ಜತೆಗೆ, ದಿನಪತ್ರಿಕೆಗಳು ಹಾಗೂ ಒಟ್ಟಾರೆ ಪತ್ರಿಕೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ. ಪತ್ರಿಕೆಗಳು ತಮ್ಮ ಸುದ್ದಿಗಳ ಮೂಲಕ ಓದುಗರನ್ನು ಸೆಳೆಯುತ್ತವೆ. ಆದರೆ ಇವೇ ಸುದ್ದಿಗಳು ವಾಟ್ಸ್ ಆ್ಯಪ್, ಫೇಸ್‌ಬುಕ್‌ನಂಥ ಸಾಮಾಜಿಕ ಮಾಧ್ಯಮಗಳಲ್ಲಿ ಮುಕ್ತವಾಗಿ ಲಭ್ಯವಾಗುತ್ತಿದ್ದರೆ ಪತ್ರಿಕೋದ್ಯಮ ವ್ಯವಹಾರದ ಮೇಲೆ ಹಾಗೂ ಪತ್ರಕರ್ತರು, ಸಂಪಾದಕರು, ಛಾಯಾಗ್ರಾಹಕರು, ವಿನ್ಯಾಸಕರು ಮುಂತಾಗಿ ಈ ಕ್ಷೇತ್ರದಲ್ಲಿ ದುಡಿಯುತ್ತಿ ರುವವರ ಮೇಲೆ ಪರಿಣಾಮ ಉಂಟಾ ಗುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.