ಲಖನೌ: ಆಜಂ ಖಾನ್ ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ) ಸೇರುತ್ತಾರೆ ಎಂಬ ವದಂತಿಗಳನ್ನು ಸಮಾಜವಾದಿ ಪಕ್ಷದ (ಎಸ್ಪಿ) ನಾಯಕ ಹಾಗೂ ಶಾಸಕ ಶಿವಪಾಲ್ ಸಿಂಗ್ ಯಾದವ್ ಮಂಗಳವಾರ ಅಲ್ಲಗಳೆದಿದ್ದಾರೆ.

ಅಜಂ ಖಾನ್ಗೆ ಜಾಮೀನು ಸಿಕ್ಕ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಶಿವಪಾಲ್ ಸಿಂಗ್, ಆಜಂ ಖಾನ್ ಸಮಾಜವಾದಿ ಪಕ್ಷದಲ್ಲಿಯೇ ಇರಲಿದ್ದಾರೆ ಎಂದರು. ಆಜಂ ಖಾನ್ ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿದ್ದರು.

ಅಜಂ ಖಾನ್ ಬೇರೆ ಪಕ್ಷ ಸೇರುವ ಪ್ರಶ್ನೆ ಇಲ್ಲ, ಅವರು ಸಮಾಜವಾದಿ ಪಕ್ಷದಲ್ಲಿದ್ದು ಅವರು ಸದಾ ಇಲ್ಲಿಯೇ ಉಳಿಯಲಿದ್ದಾರೆ ಎಂದು ಹೇಳಿದರು.

ಸಮಾಜವಾದಿ ಪಕ್ಷ ಅವರಿಗೆ ಯಾವಾಗಲೂ ಸಂಪೂರ್ಣ ಬೆಂಬಲವನ್ನು ನೀಡಿದೆ. ಆಗಾಗಿ ಅವರು ಬೇರೆ ಪಕ್ಷಕ್ಕೆ ಹೋಗುವ ಮಾತೇ ಇಲ್ಲ. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಲ್ಲಿ ಯಾವುದೇ ಸತ್ಯ ಇಲ್ಲ ಎಂದರು.

ಸದ್ಯ ನ್ಯಾಯಾಲಯ ಅವರಿಗೆ ಜಾಮೀನು ನೀಡಿದ್ದು ಶೀಘ್ರದಲ್ಲೇ ಅಜಂ ಖಾಣ್ ಅವರನ್ನು ಭೇಟಿ ಮಾಡುವುದಾಗಿ ಹೇಳಿದರು.
.ಅನರ್ಹ ಶಾಸಕ ಆಜಂ ಖಾನ್ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ.ಭಯೋತ್ಪಾದಕ ಎಂಬಂತೆ ವರ್ತನೆ: ಆಜಂ ಖಾನ್ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.