ಲಖನೌ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ಹೆಲಿಕಾಪ್ಟರ್ ಪತನಗೊಂಡಿದ್ದು, ಪೈಲೆಟ್ ಸೇರಿದಂತೆ 6 ಮಂದಿ ಮೃತಪಟ್ಟಿದ್ದಾರೆ. ಈ ಕಾರಣದಿಂದಾಗಿ ಕೇದಾರನಾಥಕ್ಕೂ ಹೆಲಿಕಾಪ್ಟರ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಡೆಹ್ರಾಡೂನ್ ಸಮೀಪವಿರುವ ಸಹಸ್ತ್ರಧಾರದ ಹರ್ಶಿಲ್ ಎಂಬ ಪ್ರೇಕ್ಷಣೀಯ ಸ್ಥಳಕ್ಕೆ ಕಾಪ್ಟರ್ ತೆರಳುತ್ತಿತ್ತು. ಮುಂಬೈನ ನಾಲ್ವರು, ಆಂಧ್ರಪ್ರದೇಶದ ಇಬ್ಬರು ಪ್ರವಾಸಿಗರು ಹಾಗೂ ಒಬ್ಬ ಪೈಲೆಟ್ ಕಾಪ್ಟರ್ನಲ್ಲಿದ್ದರು.

ಬೆಳಿಗ್ಗೆ 9 ಗಂಟೆ ವೇಳೆಗೆ ಕಾಪ್ಟರ್ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿ ಸಮೀಪಿಸುತ್ತಿದ್ದಂತೆಯೇ ಪತನಗೊಂಡಿದೆ. 7 ಮಂದಿಯ ಪೈಕಿ ಕೇವಲ ಒಬ್ಬರು ಬದುಕುಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಾರ್ಧಾಮ್ ಯಾತ್ರೆ ಕಾರಣಕ್ಕಾಗಿ ಭಾರಿ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಉತ್ತರಾಖಂಡದ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಕೇದಾರನಾಥಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ಫಟಾ, ಸಿರ್ಸಿ, ಗುಪ್ತಕಾಶಿಯಿಂದ ಹೆಲಿಕಾಪ್ಟರ್ ಸೇವೆ ಲಭ್ಯವಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.