ಲೇಹ್: ಸೋನಮ್ ವಾಂಗ್ಚುಕ್ ಅವರಿಗೆ ಪಾಕಿಸ್ತಾನದೊಂದಿಗೆ ನಂಟು ಇತ್ತು ಎಂಬ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಲಡಾಖ್ ಪೊಲೀಸ್ ಮಹಾ ನಿರ್ದೇಶಕ ಎಸ್.ಡಿ.ಸಿಂಗ್ ಜಾಮ್ವಾಲ್ ಶನಿವಾರ ತಿಳಿಸಿದರು.

ವಾಂಗ್ಚುಕ್ ಅವರು ಬುಧವಾರ ನಡೆದ ಹಿಂಸಾಚಾರಕ್ಕೆ ಮೂಲ ಎಂದು ಅವರು ಆರೋಪಿಸಿದರು.

ವಾಂಗ್ಚುಕ್ ಅವರ ವಿದೇಶ ಭೇಟಿಗಳು ಅನುಮಾನಾಸ್ಪದವಾಗಿದ್ದು, ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಅವರು ಪಾಕಿಸ್ತಾನದ ಡಾನ್ನಲ್ಲಿ ನಡೆದ ಕಾರ್ಯಕ್ರಮಕ್ಕೆ ಮತ್ತು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದರು ಎಂದು ಹೇಳಿದರು.

ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ವಾಂಗ್ಚುಕ್ ಅವರನ್ನು ಶುಕ್ರವಾರ ಬಂಧಿಸಿ, ರಾಜಸ್ಥಾನದ ಜೋಧಪುರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ವಾಂಗ್ಚುಕ್ ಬಂಧನದ ಸಮರ್ಥನೆ: ಲೆಫ್ಟಿನೆಂಟ್ ಗವರ್ನರ್ ನೇತೃತ್ವದ ಆಡಳಿತವು ಶುಕ್ರವಾರ ತಡರಾತ್ರಿ ಹೇಳಿಕೆ ಬಿಡುಗಡೆ ಮಾಡಿ, ವಾಂಗ್ಚುಕ್ ಅವರ ಬಂಧನವನ್ನು ಸಮರ್ಥಿಸಿಕೊಂಡಿದೆ. ವಾಂಗ್ಚುಕ್ ಅವರ ನಿರಂತರ ಪ್ರಚೋದನಾಕಾರಿ ಭಾಷಣಗಳು, ನೇಪಾಳ ಚಳವಳಿಯ ಉಲ್ಲೇಖದಿಂದಲೇ ಬುಧವಾರ ನಗರದಲ್ಲಿ ಹಿಂಸಾಚಾರ ನಡೆದು ನಾಲ್ವರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಅದು ಹೇಳಿದೆ.

ಲೇಹ್ನಲ್ಲಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ವಾಂಗ್ಚುಕ್ ಅವರ ಬಂಧನ ಅವಶ್ಯಕವಾಗಿತ್ತು ಎಂದು ತಿಳಿಸಿದೆ.

‘ಕಳೆದ 24 ಗಂಟೆಗಳಲ್ಲಿ ಲಡಾಖ್ನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಕಾನೂನು ಸುವ್ಯವಸ್ಥೆ ರಕ್ಷಣೆಗಾಗಿ ನಿರ್ಬಂಧವನ್ನು ಮುಂದುವರಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
.ಮುಂದಿನ ಮಹಾಕುಂಭವನ್ನು ಮರಳಿನಲ್ಲಿ ಮಾಡಬೇಕಾಗಬಹುದು: ಸೋನಮ್ ವಾಂಗ್ಚುಕ್.ಅನಿರ್ದಿಷ್ಟಾವಧಿ ಉಪವಾಸ ಕೈಗೊಳ್ಳಲಿರುವ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.