ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನದಲ್ಲಿ ತಾಂತ್ರಿಕ ದೋಷ 12 ಮಂದಿಗೆ ಗಾಯ

Last Updated 1 ಮೇ 2022, 20:12 IST
ಅಕ್ಷರ ಗಾತ್ರ

ದುರ್ಗಾಪುರ, ಪಶ್ಚಿಮ ಬಂಗಾಳ: ಮುಂಬೈ–ದುರ್ಗಾಪುರ ನಡುವಣ, ಸ್ಪೈಸ್‌ಜೆಟ್‌ ಸಂಸ್ಥೆಯ ಬೋಯಿಂಗ್‌ ಬಿ737 ವಿಮಾನ ಇಳಿಯುವ ವೇಳೆ ಭಾನುವಾರ ಕಂಡುಬಂದ ತಾಂತ್ರಿಕದೋಷದಿಂದ ಉಂಟಾದ ಒತ್ತಡದಿಂದ 12 ಮಂದಿ ಗಾಯಗೊಂಡರು.

ಪಶ್ಚಿಮ ಬಂಗಾಳದ ದುರ್ಗಾಪುರ ನಿಲ್ದಾಣದಲ್ಲಿ ಎಸ್‌ಜಿ–945 ವಿಮಾನದಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಸ್ಪೈಸ್‌ಜೆಟ್‌ನ ವಕ್ತಾರ, ‘ಕೆಲವರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ವೈದ್ಯಕೀಯ ಚಿಕಿತ್ಸೆ ಒದಗಿಸಲಾಗಿದೆ’ ಎಂದರು.

ಘಟನೆಗೆ ವಿಷಾದ ವ್ಯಕ್ತಪಡಿಸಿರುವ ಸ್ಪೈಸ್‌ಜೆಟ್‌ ಸಂಸ್ಥೆಯು, ‘ಇದೊಂದು ದುರದೃಷ್ಟಕರ ಘಟನೆ. ಗಾಯಾಳುಗಳಿಗೆ ಅಗತ್ಯವಿರುವ ಎಲ್ಲ ವೈದ್ಯಕೀಯ ಸೌಲಭ್ಯವನ್ನು ಕಲ್ಪಿಸಲಾಗುವುದು’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT