ಮಹೂ(ಮಧ್ಯಪ್ರದೇಶ): ‘ಭಾರತ ಅಭಿವೃದ್ಧಿಪಡಿಸಲಿರುವ ವಾಯುಪ್ರದೇಶ ರಕ್ಷಣಾ ವ್ಯವಸ್ಥೆ ‘ಸುದರ್ಶನ ಚಕ್ರ’ವು ಸೆನ್ಸರ್ಗಳು, ಕ್ಷಿಪಣಿಗಳು, ಕಣ್ಗಾವಲು ಉಪಕರಣಗಳು, ಕೃತಕಬುದ್ಧಿಮತ್ತೆ(ಎಐ) ಆಧಾರಿತ ಸಾಧನಗಳನ್ನು ಒಳಗೊಂಡಿರಲಿ’ ಎಂದು ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಮಂಗಳವಾರ ಹೇಳಿದ್ದಾರೆ.

‘ಈ ರಕ್ಷಣಾ ವ್ಯವಸ್ಥೆಯು ‘ಖಡ್ಗ ಮತ್ತು ಗುರಾಣಿ’ಯ ರೀತಿ ಕಾರ್ಯನಿರ್ವಹಿಸಲಿದೆ. ಇಸ್ರೇಲ್ನ ಐರನ್ ಡೋಮ್ ಅನ್ನು ಹೋಲುವ ಈ ವ್ಯವಸ್ಥೆಯು, ಎಲ್ಲ ಋತುಮಾನಗಳಲ್ಲಿಯೂ ದೇಶದ ವಾಯುಪ್ರದೇಶ ರಕ್ಷಣೆಗೆ ಸನ್ನದ್ಧವಾಗಿರಲಿದೆ’ ಎಂದು ಹೇಳಿದ್ದಾರೆ.

ಯುದ್ಧ ಮತ್ತು ತಂತ್ರಗಾರಿಕೆ ಕುರಿತು ಮೂರೂ ಸಶಸ್ತ್ರಗಳ ಪಡೆಗಳಿಗಾಗಿ ಇಲ್ಲಿ ಆರಂಭವಾದ ‘ರಣ ಸಂವಾದ’ದಲ್ಲಿ ಅವರು ಮಾತನಾಡಿದರು.

‘ಸುದರ್ಶನ ಚಕ್ರ’ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ದಿನದಂದು ಘೋಷಣೆ ಮಾಡಿದ್ದರು. ಈ ವ್ಯವಸ್ಥೆಯನ್ನು 2035ರಲ್ಲಿ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ.

‘ದೇಶದ ನಾಗರಿಕರು, ರಾಷ್ಟ್ರೀಯ ಮಹತ್ವದ ತಾಣಗಳು ಹಾಗೂ ಕಾರ್ಯತಂತ್ರದ ದೃಷ್ಟಿಯಿಂದ ಮುಖ್ಯವಾದ ಸ್ಥಳಗಳನ್ನು ರಕ್ಷಿಸುವ ಉದ್ದೇಶದಿಂದ ಈ ವಾಯುಪ್ರದೇಶ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ವ್ಯವಸ್ಥೆಯು ಖಡ್ಗದಂತೆ ಹಾಗೂ ಗುರಾಣಿಯಂತೆಯೂ ಕಾರ್ಯನಿರ್ವಹಿಸಲಿದೆ’ ಎಂದು ಚೌಹಾಣ್ ವಿವರಿಸಿದ್ದಾರೆ.

‘ನಮ್ಮ ಮೇಲೆ ಎರಗಲಿರುವ ಶತ್ರು ದೇಶಗಳ ಶಸ್ತ್ರಾಸ್ತ್ರಗಳನ್ನು ಕ್ಷಿಪ್ರವಾಗಿ ಪತ್ತೆ ಮಾಡಿ, ಅವುಗಳನ್ನು ನಾಶಪಡಿಸುವ ಸಾಮರ್ಥ್ಯ ಹಾಗೂ ಅದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಈ ವ್ಯವಸ್ಥೆ ಹೊಂದಿರಲಿದೆ’ ಎಂದಿದ್ದಾರೆ.

‘ಆಪರೇಷನ್ ಸಿಂಧೂರ’ವು ಆಧುನಿಕ ಸಂಘರ್ಷವಾಗಿದ್ದು ಕಾರ್ಯಾಚರಣೆ ವೇಳೆ ನಾವು ಹಲವು ಪಾಠಗಳನ್ನು ಕಲಿತಿದ್ದು ಅವುಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಜನರಲ್ ಅನಿಲ್ ಚೌಹಾಣ್, ಸಿಡಿಎಸ್

‘ನೆಲದ ಮೇಲಿಂದ, ವಾಯುಪ್ರದೇಶ, ಕಡಲು ಹಾಗೂ ಆಳ ಸಮುದ್ರದ ಮೂಲಕ, ಬಾಹ್ಯಾಕಾಶದಿಂದ ಹೀಗೆ ಹಲವು ಕಡೆಗಳಲ್ಲಿ ದಾಳಿ ಎದುರಿಸಲು ನಾವು ಸಿದ್ಧರಿರಬೇಕು. ಇದಕ್ಕಾಗಿ ಗುಪ್ತಚರ– ಕಣ್ಗಾವಲು–ಪತ್ತೆ ಕಾರ್ಯ (ಐಎಸ್ಆರ್) ನಿರಂತರವಾಗಿ ನಡೆಯುತ್ತಿರಬೇಕು. ಸುದರ್ಶನ ಚಕ್ರದಂತಹ ಸಮಗ್ರ ರಕ್ಷಣಾ ವ್ಯವಸ್ಥೆಯೇ ಇದಕ್ಕೆ ಉತ್ತರವಾಗಬಲ್ಲದು’ ಎಂದು ಹೇಳಿದ್ದಾರೆ.

ಪ್ರಮುಖ ಅಂಶಗಳು

ಭವಿಷ್ಯದ ಯುದ್ಧಗಳು ಗಡಿಗಳನ್ನು ಮೀರಿ ನಡೆಯಲಿವೆ. ಎಲ್ಲ ರೀತಿಯ ದಾಳಿಗಳಿಗೆ ಕ್ಷಿಪ್ರ ಮತ್ತು ನಿಖರವಾದ ಪ್ರತ್ಯುತ್ತರ ನೀಡುವುದು ಅಗತ್ಯ

ಯುದ್ಧತಂತ್ರ ಮತ್ತು ರಕ್ಷಣಾ ವ್ಯವಸ್ಥೆ ಅಭಿವೃದ್ಧಿಪಡಿಸುವಲ್ಲಿ ಮೂರು ಪಡೆಗಳು ಜಂಟಿಯಾಗಿ ಕಾರ್ಯನಿರ್ವಹಿಸುವುದು ಮುಖ್ಯ

ಕೃತಕಬುದ್ಧಿಮತ್ತೆ ಸೈಬರ್ ಕ್ವಾಂಟಮ್ ನಂತರ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಅವಶ್ಯಕ * ಭಾರತ ನಡೆಸಿದ ಯುದ್ಧಗಳು ಅಥವಾ ನಮ್ಮ ತಂತ್ರಗಾರಿಕೆ ಕುರಿತಂತೆ ವಿದ್ವತ್ಪೂರ್ಣ ವಿಶ್ಲೇಷಣೆ ಹಾಗೂ ಈ ಕುರಿತ ಸಾಹಿತ್ಯ ನಮ್ಮಲ್ಲಿ ಕಡಿಮೆ

ಯುದ್ಧ ನಾಯಕತ್ವ ಪ್ರೇರಣೆ ನೈತಿಕತೆ ಸೇರಿ ಹಲವು ವಿಚಾರಗಳ ಕುರಿತು ಗಂಭೀರವಾದ ಸಂಶೋಧನೆ ಅಗತ್ಯ ಇದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.