ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನೂಲು: ಬಿಸಿಲಿಗೆ ಬಂಡೆಯಲ್ಲಿ ಬಿರುಕು

Last Updated 12 ಏಪ್ರಿಲ್ 2023, 14:52 IST
ಅಕ್ಷರ ಗಾತ್ರ

ಕರ್ನೂಲು (ಪಿಟಿಐ): ಅತಿಯಾದ ಬಿಸಿಲಿನ ಕಾರಣಕ್ಕಾಗಿ ಇಲ್ಲಿನ ಗೋನೆಗಂಡ್ಲ ಗ್ರಾಮದಲ್ಲಿ ನೂರಾರು ಮನೆಗಳ ನಡುವೆ ಎತ್ತರದ ಜಾಗದಲ್ಲಿ ಇರುವ ದೊಡ್ಡ ಗಾತ್ರದ ಬಂಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಕಾರಣಕ್ಕಾಗಿ ಈ ಪ್ರದೇಶದಲ್ಲಿ ವಾಸಿಸುವ 150 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.

‘ಬಂಡೆಯಲ್ಲಿ ಮಂಗಳವಾರ ಬಿರುಕು ಕಾಣಿಸಿಕೊಂಡಿದೆ. ಆದರೆ, ಅದೃಷ್ಟವಶಾತ್‌ ಬುಧವಾರದವರೆಗೂ ಈ ಬಿರುಕು ಇನ್ನಷ್ಟು ದೊಡ್ಡದಾಗಿಲ್ಲ. ಬಿರುಕು ದೊಡ್ಡದಾಗಿ ಬಂಡೆ ಹೊಡೆದು ಹೋಗಿ ಕೆಳಗೆ ಬೀಳುವ ಆತಂಕ ಎದುರಾಗಿತ್ತು. ರಾಜ್ಯ ವಿಪತ್ತು ಸ್ಪಂದನಾ ಪಡೆಯ (ಎಸ್‌ಡಿಆರ್‌ಎಫ್‌) ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಜಿ.ಸೃಜನಾ ಮಾಹಿತಿ ನೀಡಿದರು.

‘ಒಂದು ವೇಳೆ ಬಂಡೆಗಳು ಚೂರಾದರೆ, ಈ 150 ಕುಟುಂಬಗಳ ಮನೆ ಮೇಲೆ ಬೀಳುವ ಸಾಧ್ಯತೆಗಳಿವೆ. ಆದ್ದರಿಂದ ಬಂಡೆಯ ಹಿಂಭಾಗದಲ್ಲಿ ಇರುವ ಶಾಲೆಯೊಂದರಲ್ಲಿ ಈ ಕುಟುಂಬಗಳಿಗೆ ಆಶ್ರಯ ನೀಡಲಾಗಿದೆ’ ಎಂದರು.

ಬಿಸಿಲಿನ ಝಳ ಹೆಚ್ಚಾದ ಕಾರಣಕ್ಕೇ ಬಂಡೆಯಲ್ಲಿ ಬಿರುಕು ಬಂದಿರಬಹುದು ಎನ್ನುವುದು ಜಿಲ್ಲಾಧಿಕಾರಿ ಅವರ ಅಭಿಪ್ರಾಯ. ಆದರೆ, ಮಂಗಳವಾರ ಕರ್ನೂಲಿನಲ್ಲಿ ಹೆಚ್ಚಿನ ತಾಪಮಾನ ದಾಖಲಾಗಿಲ್ಲ ಎನ್ನುತ್ತದೆ ಹವಾಮಾನ ಇಲಾಖೆ. ಆಂಧ್ರ ಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಎಪಿಎಸ್‌ಡಿಎಂಎ) ಗೋನೆಗಂಡ್ಲ ಗ್ರಾಮದಲ್ಲಿ ಮಂಗಳವಾರ ಗರಿಷ್ಠ ತಾಪಮಾನ ಅಂದರೆ, 38.2 ಡಿಗ್ರಿ ಸೆಲ್ಸಿಯಸ್‌ ಇತ್ತು ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT