ಬೆತಿಯಾ: ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಶಂಕಿತ ನಕಲಿ ಮದ್ಯ ಸೇವಿಸಿ 7 ಮಂದಿ ಸಾವಿಗೀಡಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.

ಸಾವಿನ ಬಗ್ಗೆ ಭಾನುವಾರ ಪೊಲೀಸರಿಗೆ ಮಾಹಿತಿ ಬಂದಿದ್ದು, ನಾಲ್ಕು ದಿನಗಳ ಹಿಂದೆಯೇ ಮೊದಲ ಸಾವು ಸಂಭವಿಸಿತ್ತು. ಸಾವಿಗೀಡಾದ ಏಳೂ ಮಂದಿಯ ಅಂತ್ಯ ಸಂಸ್ಕಾರವೂ ನಡೆದಿದೆ.
.ವಿಜಯಪುರ: ₹8.5 ಲಕ್ಷ ಮೌಲ್ಯದ ನಕಲಿ ಮದ್ಯ ವಶ; ಆರು ಜನರ ಬಂಧನ .
ಎಲ್ಲಾ ಸಾವುಗಳು ಲೌರಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ನಡೆದಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶೌರ್ಯ ಸುಮನ್ ತಿಳಿಸಿದ್ದಾರೆ.

ನಕಲಿ ಮದ್ಯ ಸೇವಿಸಿ ಸಾವು ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಎರಡು ಸಾವಿನ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಓರ್ವನಿಗೆ ಟ್ರ್ಯಾಕ್ಟರ್ ಗುದ್ದಿದ್ದು, ಮತ್ತೊಬ್ಬ ಪಾರ್ಶ್ವವಾಯು ಪೀಡಿತನಾಗಿದ್ದ ಎಂದು ಎಸ್ಪಿ ತಿಳಿಸಿದ್ದಾರೆ.

‘ಜನವರಿ 15ರಂದು ಮೊದಲ ಸಾವು ಸಂಭವಿಸಿದೆ. ಆದರೆ ನಮಗೆ ಈ ವಿಷಯ ಇಂದು ತಿಳಿದಿದೆ. ಐವರ ಸಾವಿನ ಕಾರಣದ ಬಗ್ಗೆ ಮಾಹಿತಿ ಇಲ್ಲ. ಪೊಲೀಸರಿಗೆ ಮಾಹಿತಿ ನೀಡುವ ಮೊದಲೇ ಎಲ್ಲರ ಅಂತ್ಯ ಸಂಸ್ಕಾರವೂ ನಡೆದಿದೆ. ಸಾವಿನ ಬಗ್ಗೆ ಮಾಹಿತಿ ಪಡೆಯಲು ನಾವು ತನಿಖಾ ತಂಡ ರಚಿಸಿದ್ದೇವೆ’ ಎಂದು ಅವರು ಭಾನುವಾರ ಹೇಳಿದ್ದಾರೆ.
.ಬಿಹಾರದಲ್ಲಿ ನಕಲಿ ಮದ್ಯ ದುರಂತ: ಇಬ್ಬರು ಪೊಲೀಸರ ಅಮಾನತು, 21 ಜನರು ಬಂಧನ.
ಶವಗಳ ಅಂತ್ಯ ಸಂಸ್ಕಾರ ನಡೆದಿರುವುದರಿಂದ ಸಾವಿನ ಕಾರಣ ಪತ್ತೆ ಕಷ್ಟಸಾಧ್ಯ. 24 ಗಂಟೆಯೊಳಗೆ ವರದಿ ಸಲ್ಲಿಸಲು ತನಿಖಾ ತಂಡಕ್ಕೆ ಸೂಚಿಸಲಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಲೌರಿಯಾದಲ್ಲಿ ಸತ್ತವರ ಗುರುತು ಪತ್ತೆಯೂ ನಡೆಯಲಿದೆ ಎಂದು ಪಶ್ಚಿಮ ಚಂಪಾರಣ್ ಜಿಲ್ಲೆಯ ಉಪ ಅಭಿವೃದ್ಧಿ ಆಯುಕ್ತ ಸುಮಿತ್ ಕುಮಾರ್ ಹೇಳಿದ್ದಾರೆ.

‘ನನ್ನ ಸಹೋದರ ಪ್ರದೀಪ್ ಆತನ ಸ್ನೇಹಿತ ಮನೀಶ್ ಜೊತೆ ಮದ್ಯ ಸೇವಿಸಿದ್ದ. ಇಬ್ಬರೂ ಸಾವಿಗೀಡಾಗಿದ್ದಾರೆ’ ಎಂದು ಮೃತ ವ್ಯಕ್ತಿಯ ಕುಟುಂಬಸ್ಥರೊಬ್ಬರು ತಿಳಿಸಿದ್ದಾರೆ.

2016 ಏಪ್ರಿಲ್ನಿಂದ ಬಿಹಾರದಲ್ಲಿ ಮದ್ಯ ನಿಷೇಧ ಜಾರಿಯಲ್ಲಿದೆ.
.Hooch Tragedy | ಬಿಹಾರ: ನಕಲಿ ಮದ್ಯ ಸೇವನೆ; ಮೃತರ ಸಂಖ್ಯೆ 37ಕ್ಕೆ ಏರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.