ನಾಗರ್ಕರ್ನೂಲ್ (ತೆಲಂಗಾಣ): ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಶ್ರೀಶೈಲಂ ಎಡದಂಡೆ ಕಾಲುವೆ ಕುಸಿದು, ಅವಶೇಷಗಳ ಅಡಿ ಸಿಲುಕಿರುವ ಏಳು ಮಂದಿಯ ಪತ್ತೆಗೆ ಶೋಧ ಕಾರ್ಯ ನಿರಂತರವಾಗಿ ಸಾಗಿದೆ.

ರಕ್ಷಣಾ ತಂಡಗಳ ಇನ್ನಷ್ಟು ಸದಸ್ಯರು ಅಗತ್ಯ ಸಲಕರಣೆಗಳೊಂದಿಗೆ ಭಾನುವಾರ ಸುರಂಗದೊಳಗೆ ತೆರಳಿರುವುದರಿಂದ ಶೋಧ ಕಾರ್ಯ ವೇಗ ಪಡೆದುಕೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಹೈಡ್ರಾಲಿಕ್ ಚಾಲಿತ ರೋಬಾಟ್ಅನ್ನು ಕಾರ್ಯಾಚರಣೆಗೆ ಬಳಸಿರುವುದರಿಂದ ಮಣ್ಣು ಹಾಗೂ ಇತರ ಅವಶೇಷಗಳ ತೆರವುಗೊಳಿಸುವ ಪ್ರಕ್ರಿಯೆಗೆ ಇನ್ನಷ್ಟು ವೇಗ ಲಭಿಸಿದೆ.

ಫೆ. 22ರಂದು ಸುರಂಗ ಭಾಗಶಃ ಕುಸಿದ ಪರಿಣಾಮ ಎಂಟು ಮಂದಿ ಒಳಗೆ ಸಿಲುಕಿದ್ದರು. ಅದರಲ್ಲಿ ಗುರುಪ್ರೀತ್ ಸಿಂಗ್ ಎಂಬವರ ಮೃತದೇಹ ಮಾರ್ಚ್ 9ರಂದು ಪತ್ತೆಯಾಗಿತ್ತು. ಸೇನೆ, ಎನ್ಡಿಆರ್ಎಫ್, ಎಚ್ಆರ್ಡಿಡಿ ಮತ್ತು ಸಿಂಗರೇನಿ ಕಾಲಿಯೆರೀಸ್ ಸಂಸ್ಥೆಯ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.