ಕೋಲ್ಕತ್ತ: ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನೆರೆಯ ಬಾಂಗ್ಲಾದೇಶದಲ್ಲಿ ದಾಳಿಗಳು ನಡೆಯುತ್ತಿವೆ ಎಂಬ ಆರೋಪಗಳು, ವರದಿಗಳು ಕೇಳಿಬರುತ್ತಿರುವುದರ ನಡುವೆಯೇ, ಕೋಲ್ಕತ್ತ ಯುವಕನೊಬ್ಬ ಕಳವಳಕಾರಿ ಹೇಳಿಕೆ ನೀಡಿದ್ದಾನೆ. 'ಭಾರತೀಯ ಎಂಬ ಕಾರಣಕ್ಕೆ ಅಪರಿಚಿತ ದುಷ್ಕರ್ಮಿಗಳು ಢಾಕಾದಲ್ಲಿ ನನ್ನನ್ನು ಥಳಿಸಿದ್ದಾರೆ' ಎಂದು ಹೇಳಿಕೊಂಡಿದ್ದಾರೆ.

ಹೇಳಿಕೆ ನೀಡಿರುವ ಯುವಕನನ್ನು 22 ವರ್ಷದ ಸಯಾನ್ ಘೋಷ್ ಎಂದು ಗುರುತಿಸಲಾಗಿದ್ದು, ಈತ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತದ ಉತ್ತರಿಕ್ಕಿರುವ ಬೆಲ್ಘಾರಿಯಾ ಪ್ರದೇಶದವ. ತಾನು, ನವೆಂಬರ್ 23ರಂದು ಬಾಂಗ್ಲಾದೇಶಕ್ಕೆ ಹೋಗಿ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದೆ. ಆ ಕುಟುಂಬದವರು ತಮ್ಮನ್ನು ಸ್ವಂತ ಮಗನಂತೆ ನೋಡಿಕೊಂಡಿದ್ದರು ಎಂದಿದ್ದಾರೆ.

'ನಾನು ಮತ್ತು ಸ್ನೇಹಿತ ನವೆಂಬರ್ 26ರ ಸಂಜೆ ಅಡ್ಡಾಡಲು ಹೋಗಿದ್ದೆವು. ಮನೆಯಿಂದ ಸುಮಾರು 70 ಮೀಟರ್ ದೂರದಲ್ಲಿ ನಾಲ್ಕೈದು ಯುವಕರ ಗುಂಪು ನಮ್ಮನ್ನು ಅಡ್ಡಗಟ್ಟಿ, ನನ್ನ ವಿವರ ಕೇಳಿತು. ನಾನು – ಹಿಂದೂ, ಭಾರತೀಯ ಎಂದೆ. ಕೂಡಲೇ ನನಗೆ ಒದ್ದು, ಥಳಿಸಲಾರಂಭಿಸಿದರು. ನನ್ನನ್ನು ರಕ್ಷಿಸಲು ಬಂದ ಸ್ನೇಹಿತನಿಗೂ ಹಲ್ಲೆ ಮಾಡಿದರು' ಎಂದು 'ಪಿಟಿಐ'ಗೆ ಹೇಳಿಕೆ ನೀಡಿದ್ದಾರೆ.

'ಚಾಕು ತೋರಿಸಿ, ನನ್ನ ಮೊಬೈಲ್ ಮತ್ತು ವ್ಯಾಲೆಟ್ ಅನ್ನೂ ಕಸಿದುಕೊಂಡರು. ದಾರಿಯಲ್ಲಿ ಹೋಗುತ್ತಿದ್ದ ಯಾರೊಬ್ಬರೂ ನಮ್ಮ ನೆರವಿಗೆ ಬರಲಿಲ್ಲ. ಹತ್ತಿರದಲ್ಲಿ ಪೊಲೀಸರೂ ಇರಲಿಲ್ಲ. ಘಟನೆಯ ಬೆನ್ನಲ್ಲೇ, ಶ್ಯಾಮ್ಪುರ ಪೊಲೀಸ್ ಠಾಣೆಗೆ ಹೋದೆವು. ಆದರೆ, ಅಲ್ಲಿ ದೂರು ದಾಖಲಿಸಿಕೊಳ್ಳಲಿಲ್ಲ. ಬದಲಾಗಿ, ಪದೇ ಪದೇ ನಾನು ಬಾಂಗ್ಲಾದೇಶಕ್ಕೆ ಬಂದದ್ದೇಕೆಂದು ಪ್ರಶ್ನಿಸಿದರು. ನನ್ನ ಪಾಸ್ಪೋರ್ಟ್, ವೀಸಾ ತೋರಿಸಿದ ನಂತರ ಹಾಗೂ ನನ್ನ ಮಿತ್ರ ಮತ್ತು ಆತನ ಕುಟುಂಬದವರೊಂದಿಗೆ ಮಾತನಾಡಿದ ಬಳಿಕವಷ್ಟೇ ಸುಮ್ಮನಾದರು. ಚಿಕಿತ್ಸೆ ಪಡೆಯುವಂತೆ ಹೇಳಿ ಕಳುಹಿಸಿದರು. ಇಷ್ಟೆಲ್ಲ ಆದರೂ, ಎರಡು ಮೂರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗಲಿಲ್ಲ. ಕೊನೆಗೆ ಢಾಕಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಹೋಗಬೇಕಾಯಿತು' ಎಂದು ವಿವರಿಸಿದ್ದಾರೆ.
.ಬಾಂಗ್ಲಾದೇಶ: ಚಟ್ಟೋಗ್ರಾಮದಲ್ಲಿ 3 ಹಿಂದೂ ದೇಗುಲ ಧ್ವಂಸ.ಬಾಂಗ್ಲಾದೇಶ: ಹಿಂದೂ ಮುಖಂಡ ಚಿನ್ಮಯಿ ಸೇರಿದಂತೆ 17 ಮಂದಿಯ ಬ್ಯಾಂಕ್ ಖಾತೆ ಸ್ಥಗಿತ.
'ಘಟನೆ ನಡೆದ ಮೂರು ಗಂಟೆಗಳ ನಂತರ ಚಿಕಿತ್ಸೆ ಪಡೆದೆ. ನನ್ನ ಹಣೆ, ತಲೆ ಮೇಲೆ ಹೊಲಿಗೆ ಹಾಕಲಾಗಿದೆ. ಬಾಯಿಗೂ ಗಾಯವಾಗಿದೆ' ಎನ್ನುತ್ತಲೇ ದುಷ್ಕೃತ್ಯವನ್ನು ನೆನಪಿಸಿಕೊಂಡಿದ್ದಾರೆ.

ಘೋಷ್ ನವೆಂಬರ್ 30ರಂದು ಭಾರತಕ್ಕೆ ವಾಪಸ್ ಆಗಿದ್ದಾರೆ. ಅವರ ದೂರನ್ನು, ದರ್ಶನಾ ಗಡಿ ಪ್ರದೇಶದಲ್ಲಿರುವ ಬಾಂಗ್ಲಾದೇಶ ಗಡಿ ಕಾವಲು ಪಡೆಯೂ ಅಧಿಕೃತವಾಗಿ ಸ್ವೀಕರಿಸಿಲ್ಲ. ಹಾಗಾಗಿ, ಬೆಲ್ಘಾರಿಯಾದಲ್ಲಿ ದೂರು ದಾಖಲಿಸಬಹುದಾಗಿದೆ.

'ನನ್ನ ಸ್ನೇಹಿತ ಮತ್ತು ಆತನ ಕುಟುಂಬದವರ ಸುರಕ್ಷತೆಯ ದೃಷ್ಟಿಯಿಂದ, ಢಾಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಹೋಗುವ ಧೈರ್ಯ ಬರಲಿಲ್ಲ' ಎಂದು ತಿಳಿಸಿದ್ದಾರೆ.

ಘಟನಾ ನಂತರವೂ ಮೂರು ದಿನ ತಮ್ಮ ಮನೆಯಲ್ಲೇ ಉಳಿದಿದ್ದ ಘೋಷ್ ಅವರನ್ನು, ಆತನ ಸ್ನೇಹಿತ ನವೆಂಬರ್ 29ರ ಮುಂಜಾನೆ ರೈಲ್ವೆ ನಿಲ್ದಾಣಕ್ಕೆ ಬಿಟ್ಟಿದ್ದರು. ಅಲ್ಲಿಂದ ದರ್ಶನಾಗೆ ರೈಲಿನ ಮೂಲಕ ಬಂದಿದ್ದಾರೆ. ಅದೇ ದಿನ ಭಾರತದತ್ತ ಬಂದ ಘೋಷ್, ಸೀಲ್ದಾದಿಂದ ಸ್ಥಳೀಯ ರೈಲಿನ ಮೂಲಕ ಬೆಲ್ಘಾರಿಯಾಗೆ ತಲುಪಿದ್ದಾರೆ.

ಈ ವಿಚಾರವನ್ನು ಯಾರೂ ರಾಜಕೀಯಗೊಳಿಸಬೇಡಿ ಎಂದು ಮನವಿ ಮಾಡಿರುವ ಯುವಕ, ಕೋಲ್ಕತ್ತದಲ್ಲಿರುವ ಬಾಂಗ್ಲಾದೇಶ ಉಪ ಹೈಕಮಿಷನ್ಗೆ ದೂರು ನೀಡಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

'ನಮ್ಮದೇ ಭಾಷೆ ಮಾತನಾಡುವ, ನಮ್ಮಂತೆಯೇ ಆಹಾರ ಕ್ರಮ ಹೊಂದಿರುವ ಜನರಿಂದ ನೆರೆ ರಾಷ್ಟ್ರದಲ್ಲಿ ಇಂತಹ ಸ್ಥಿತಿ ಬಂದೊದಗಲಿದೆ ಎಂದು ನಾನು ಊಹಿಸಿಯೂ ಇರಲಿಲ್ಲ' ಎಂದು ನೊಂದುಕೊಂಡಿದ್ದಾರೆ.

ಎಲ್ಲ ಸಮುದಾಯದವರು, ಪ್ರವಾಸಿಗರು ಸೇರಿದಂತೆ ಪ್ರತಿಯೊಬ್ಬ ನಾಗರಿಕರ ಸುರಕ್ಷತೆ ಕಾಪಾಡಲು ಬಾಂಗ್ಲಾದೇಶದಲ್ಲಿರುವ ಮಧ್ಯಂತರ ಸರ್ಕಾರವು ಬದ್ಧವಾಗಿದೆ. ದೂರು ದಾಖಲಾದ ನಂತರ, ಪರಿಶೀಲಿಸುತ್ತೇವೆ ಎಂದು ಕೋಲ್ಕತ್ತದಲ್ಲಿರುವ ಡೆಪ್ಯುಟಿ ಹೈಕಮಿಷನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.