ಬುಧವಾರ, 8 ಮೇ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News | ಈ ದಿನದ ಪ್ರಮುಖ ಸುದ್ದಿಗಳು: ಅಕ್ಟೋಬರ್ 23 ಸೋಮವಾರ 2023

Published 23 ಅಕ್ಟೋಬರ್ 2023, 13:35 IST
Last Updated 23 ಅಕ್ಟೋಬರ್ 2023, 13:35 IST
ಅಕ್ಷರ ಗಾತ್ರ
Introduction

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಬಿಶನ್ ಸಿಂಗ್‌ ಬೇಡಿ ನಿಧನ, ರನ್‌ವೇನಲ್ಲಿ ದೇವರ ಮೆರವಣಿಗೆ: ತಿರುವನಂತಪುರ ವಿಮಾನ ನಿಲ್ದಾಣ 5 ತಾಸು ಬಂದ್!, ತಮಿಳುನಾಡು: ಬಿಜೆಪಿಗೆ ಗುಡ್ ಬೈ ಹೇಳಿದ ನಟಿ ಗೌತಮಿ ತಡಿಮಲ್ಲ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ..

1

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಬಿಶನ್ ಸಿಂಗ್‌ ಬೇಡಿ ನಿಧನ

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಲೆಜೆಂಡರಿ ಸ್ಪಿನ್ನರ್‌ ಬಿಶನ್‌ ಸಿಂಗ್‌ ಬೇಡಿ (77) ಅವರು ಇಂದು ನಿಧನರಾದರು.

ಈ ಸುದ್ದಿಯನ್ನು ಪೂರ್ಣ ಓದಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಬಿಶನ್ ಸಿಂಗ್‌ ಬೇಡಿ ನಿಧನ

2

ರನ್‌ವೇನಲ್ಲಿ ದೇವರ ಮೆರವಣಿಗೆ: ತಿರುವನಂತಪುರ ವಿಮಾನ ನಿಲ್ದಾಣ 5 ತಾಸು ಬಂದ್!

ವಿಮಾನದ ರನ್‌ವೇನಲ್ಲಿ ಶ್ರೀ ಪದ್ಮನಾಭಸ್ವಾಮಿ ದೇವರ ಮೆರವಣಿಗೆ 'ಅರಟ್ಟು' ಸಾಗುವ ಹಿನ್ನೆಲೆಯಲ್ಲಿ ಸೋಮವಾರ (ಅ.23) ಐದು ಗಂಟೆಗಳ ಕಾಲ ತಿರುವನಂತಪುರ ವಿಮಾನ ನಿಲ್ದಾಣದ ಕಾರ್ಯ ಸ್ಥಗಿತಗೊಳಿಸಲಾಗಿದೆ ಎಂದು ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹೇಳಿದೆ.

ಈ ಸುದ್ದಿಯನ್ನು ಪೂರ್ಣ ಓದಿ: ರನ್‌ವೇನಲ್ಲಿ ದೇವರ ಮೆರವಣಿಗೆ: ತಿರುವನಂತಪುರ ವಿಮಾನ ನಿಲ್ದಾಣ 5 ತಾಸು ಬಂದ್!

3

ಬೀದಿ ನಾಯಿಗಳ ದಾಳಿ: ವಾಘ್‌ ಬಕ್ರಿ ಕಂಪನಿ ನಿರ್ದೇಶಕ ಪರಾಗ್‌ ದೇಸಾಯಿ ಸಾವು

ವಾಘ್ ಬಕ್ರಿ ಟೀ ಗ್ರೂಪ್‌ನ ನಿರ್ದೇಶಕ ಪರಾಗ್ ದೇಸಾಯಿ ಅವರು ಮಿದುಳು ರಕ್ತಸ್ರಾವದಿಂದ ಸಾವಿಗೀಡಾಗಿದ್ದಾರೆ.

ಈ ಸುದ್ದಿಯನ್ನು ಪೂರ್ಣ ಓದಿ: ಬೀದಿ ನಾಯಿಗಳ ದಾಳಿ: ವಾಘ್‌ ಬಕ್ರಿ ಕಂಪನಿ ನಿರ್ದೇಶಕ ಪರಾಗ್‌ ದೇಸಾಯಿ ಸಾವು

4

ತಮಿಳುನಾಡು: ಬಿಜೆಪಿಗೆ ಗುಡ್ ಬೈ ಹೇಳಿದ ನಟಿ ಗೌತಮಿ ತಡಿಮಲ್ಲ

ಖ್ಯಾತ ನಟಿ ಗೌತಮಿ ತಡಿಮಲ್ಲ ಅವರು ಬಿಜೆಪಿಯೊಂದಿಗಿನ ತನ್ನ 25 ವರ್ಷಗಳ ಒಡನಾಟವನ್ನು ಕೊನೆಗೊಳಿಸುತ್ತಿರುವುದಾಗಿ ಹೇಳಿದ್ದಾರೆ. ‘ಪಕ್ಷವು ತಮಗೆ ವಂಚಿಸಿದ ವ್ಯಕ್ತಿಗೆ ಬೆಂಬಲ ನೀಡುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

ಈ ಸುದ್ದಿಯನ್ನು ಪೂರ್ಣ ಓದಿ: ತಮಿಳುನಾಡು: ಬಿಜೆಪಿಗೆ ಗುಡ್ ಬೈ ಹೇಳಿದ ನಟಿ ಗೌತಮಿ ತಡಿಮಲ್ಲ

5

ಹುಲಿ ಉಗುರು ಧರಿಸಿದ್ದ ಆರೋಪ: ಬಿಗ್ ಬಾಸ್ ಮನೆಯಲ್ಲೇ ವರ್ತೂರು ಸಂತೋಷ್ ಬಂಧನ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಬಿಗ್‌ ಬಾಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ವರ್ತೂರು ಸಂತೋಷ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.

ಈ ಸುದ್ದಿಯನ್ನು ಪೂರ್ಣ ಓದಿ: ಹುಲಿ ಉಗುರು ಧರಿಸಿದ್ದ ಆರೋಪ: ಬಿಗ್ ಬಾಸ್ ಮನೆಯಲ್ಲೇ ವರ್ತೂರು ಸಂತೋಷ್ ಬಂಧನ

6

ಬಾಂಗ್ಲಾದೇಶದಲ್ಲಿ ಎರಡು ರೈಲುಗಳ ನಡುವೆ ಡಿಕ್ಕಿ: 15 ಪ್ರಯಾಣಿಕರ ಸಾವು

ಪ್ರಯಾಣಿಕ ರೈಲೊಂದು ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದು ಕನಿಷ್ಠ 15 ಪ್ರಯಾಣಿಕರು ಮೃತಪಟ್ಟ ಘಟನೆ ಬಾಂಗ್ಲಾದೇಶದಲ್ಲಿ ಸೋಮವಾರ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಪೂರ್ಣ ಓದಿ: ಬಾಂಗ್ಲಾದೇಶದಲ್ಲಿ ಎರಡು ರೈಲುಗಳ ನಡುವೆ ಡಿಕ್ಕಿ: 15 ಪ್ರಯಾಣಿಕರ ಸಾವು

7

ಕೋಲಾರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೌನ್ಸಿಲರ್ ಸೀನಪ್ಪ ಬರ್ಬರ ಹತ್ಯೆ

ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಆಪ್ತ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ (ಕೌನ್ಸಿಲರ್ ಸೀನಪ್ಪ) ಎಂಬುವರನ್ನು ಸೋಮವಾರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಈ ಸುದ್ದಿಯನ್ನು ಪೂರ್ಣ ಓದಿ: ಕೋಲಾರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೌನ್ಸಿಲರ್ ಸೀನಪ್ಪ ಬರ್ಬರ ಹತ್ಯೆ

8

ನಾಳೆ ದಸರಾ ಜಂಬೂಸವಾರಿ: ವಿಜಯದಶಮಿ ಮೆರವಣಿಗೆಗೆ ಲಕ್ಷಾಂತರ ಮಂದಿ ಭಾಗಿ ನಿರೀಕ್ಷೆ

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆಯು ಮಂಗಳವಾರ (ಅ.24) ನಡೆಯಲಿದ್ದು, ಜಿಲ್ಲಾಡಳಿತದಿಂದ ಅಂತಿಮ ಹಂತದ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಈ ಸುದ್ದಿಯನ್ನು ಪೂರ್ಣ ಓದಿ: ನಾಳೆ ದಸರಾ ಜಂಬೂಸವಾರಿ: ವಿಜಯದಶಮಿ ಮೆರವಣಿಗೆಗೆ ಲಕ್ಷಾಂತರ ಮಂದಿ ಭಾಗಿ ನಿರೀಕ್ಷೆ

9

ಬೆಳಗಾವಿ: ವಿದ್ಯುತ್ ತಂತಿಯಿಂದ ಹೊಲಕ್ಕೆ ಬೆಂಕಿ– ಉರಿದು ಬೂದಿಯಾದ 30 ಎಕರೆ ಕಬ್ಬು

ಬೈಲಹೊಂಗಲ ತಾಲೂಕಿನ ಚಿವಟಗುಂಡಿ ಗ್ರಾಮದಲ್ಲಿ ಸೋಮವಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಅಂದಾಜು 30 ಎಕರೆ ಕಬ್ಬು ಸುಟ್ಟಿದೆ.

ಈ ಸುದ್ದಿಯನ್ನು ಪೂರ್ಣ ಓದಿ: ಬೆಳಗಾವಿ: ವಿದ್ಯುತ್ ತಂತಿಯಿಂದ ಹೊಲಕ್ಕೆ ಬೆಂಕಿ– ಉರಿದು ಬೂದಿಯಾದ 30 ಎಕರೆ ಕಬ್ಬು

10

ವಿಶೇಷಚೇತನರಿಗಾಗಿ ಮುಂದಿನ ವರ್ಷ ಗೋವಾದಲ್ಲಿ ಅಂತರರಾಷ್ಟ್ರೀಯ ನೇರಳೆ ಉತ್ಸವ

2024 ರ ಜನವರಿ 8 ರಿಂದ 13 ರವರೆಗೆ ವಿಶೇಷ ಚೇತನ ವ್ಯಕ್ತಿಗಳ ಪಾಲ್ಗೊಳ್ಳುವಿಕೆ ಮತ್ತು ಸಬಲೀಕರಣವನ್ನು ಆಚರಿಸುವ ಸಲುವಾಗಿ ಅಂತರರಾಷ್ಟ್ರೀಯ ನೇರಳೆ ಉತ್ಸವವನ್ನು (ಪರ್ಪಲ್ ಫೆಸ್ಟ್) ಗೋವಾ ರಾಜ್ಯ ಆಯೋಜಿಸಿದೆ.

ಈ ಸುದ್ದಿಯನ್ನು ಪೂರ್ಣ ಓದಿ: ವಿಶೇಷಚೇತನರಿಗಾಗಿ ಮುಂದಿನ ವರ್ಷ ಗೋವಾದಲ್ಲಿ ಅಂತರರಾಷ್ಟ್ರೀಯ ನೇರಳೆ ಉತ್ಸವ