ಕೇಂದ್ರ ಬಜೆಟ್, ರಾಜ್ಯ, ರಾಷ್ಟ್ರೀಯ, ವಾಣಿಜ್ಯ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ.

ನಗರಾಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ, ಬೆಂಗಳೂರು, ಸೂರತ್, ವಾರಾಣಸಿ ಸೇರಿ 7 ನಗರ ಆರ್ಥಿಕ ವಲಯಗಳನ್ನು (ಸಿಇಆರ್ಎಸ್) ಸಾರ್ವಜನಿಕ–ಖಾಸಗಿ ಪಾಲುದಾರಿಕೆಯಡಿ (ಪಿಪಿಪಿ) ಅಭಿವೃದ್ಧಿ ಪಡಿಸಲಿದೆ. ಇದಕ್ಕಾಗಿ ಮುಂದಿನ 5 ವರ್ಷಗಳ ಅವಧಿಗೆ ಪ್ರತಿ ನಗರ ಪ್ರದೇಶಕ್ಕೆ ₹5 ಸಾವಿರ ಕೋಟಿಯಂತೆ ಅನುದಾನ ಮೀಸಲಿಡಲಾಗಿದೆ.
.Union Budget 2026: ಬೆಂಗಳೂರು ಸೇರಿ 7 ನಗರ ಆರ್ಥಿಕ ವಲಯ ಅಭಿವೃದ್ಧಿ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
.SIR ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ.
ರಿಯಲ್ ಎಸ್ಟೇಟ್ ಕಂಪನಿ ‘ಕಾನ್ಫಿಡೆಂಟ್ ಗ್ರೂಪ್’ನ ಮುಖ್ಯಸ್ಥ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ಚುರುಕುಗೊಳಿಸಿದೆ. ಕೊಚ್ಚಿಯಿಂದ ಬಂದಿರುವ ಐಆರ್ಎಸ್ ಅಧಿಕಾರಿ ಕೃಷ್ಣಪ್ರಸಾದ್ ನೇತೃತ್ವದ ತಂಡ ಕಾನ್ಫಿಡೆಂಟ್ ಗ್ರೂಪ್ಗೆ ಸಂಬಂಧಿಸಿದ ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ಈ ತಂಡಕ್ಕೆ ಬೆಂಗಳೂರು ಬಿಟ್ಟು ತೆರಳದಂತೆ ಸೂಚಿಸಿರುವ ಎಸ್ಐಟಿ, ಅಗತ್ಯವಿದ್ದರೆ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ತಿಳಿಸಿದೆ.
.CJ ರಾಯ್ ಆತ್ಮಹತ್ಯೆ: ಬೆಂಗಳೂರು ಬಿಟ್ಟು ತೆರಳದಂತೆ ಐಟಿ ಅಧಿಕಾರಿಗಳಿಗೆ SIT ಸೂಚನೆ.
ಇದು ದೂರದೃಷ್ಟಿ ಇಲ್ಲದ, ನಿರಾಶಾದಾಯಕ ಬಜೆಟ್. ಕೇಂದ್ರ ಸರ್ಕಾರವು ಬಜೆಟ್ನಲ್ಲಿ ರಾಜ್ಯಕ್ಕೆ ಬರೀ ಚೊಂಬು ಕೊಟ್ಟಿದೆ. ಕೇವಲ ಕರ್ನಾಟಕವಲ್ಲ, ಇಡೀ ದಕ್ಷಿಣ ಭಾರತಕ್ಕೇ ಏನೂ ಕೊಟ್ಟಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
.ರಾಜ್ಯಕ್ಕೆ ಬರೀ ಚೊಂಬು ಕೊಟ್ಟಿದೆ: ಕೇಂದ್ರ ಬಜೆಟ್ಗೆ ಸಿಎಂ ಸಿದ್ದರಾಮಯ್ಯ ಟೀಕೆ.
ಕರ್ನಾಟಕದಲ್ಲಿ ಹೊಸ ರೈಲು ಮಾರ್ಗಗಳ ನಿರ್ಮಾಣ, ಜೋಡಿ ಹಳಿ ಹಾಗೂ ಗೇಜ್ ಪರಿವರ್ತನೆ ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗೆ ಕೇಂದ್ರ ಬಜೆಟ್ನಲ್ಲಿ ₹7,748 ಕೋಟಿ ಹಂಚಿಕೆ ಮಾಡಲಾಗಿದೆ.
.Union Budget 2026 | ರಾಜ್ಯದ ರೈಲ್ವೆ ಯೋಜನೆಗಳಿಗೆ ₹7,748 ಕೋಟಿ.
ಕೇಂದ್ರ ಸರ್ಕಾರದ ಬಜೆಟ್ನಿಂದ ಕರ್ನಾಟಕಕ್ಕೆ ಯಾವುದೇ ಅನುಕೂಲವಾಗಿಲ್ಲ. ಬೆಂಗಳೂರಿಗೆ ಯಾವ ಹೈಸ್ಪೀಡ್ ರೈಲೂ ಬರಲ್ಲ. ರಾಜ್ಯಕ್ಕೆ ಬಜೆಟ್ನಲ್ಲಿ ಯಾವುದೇ ಕೊಡುಗೆ ನೀಡಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
.Union Budget| ಯಾವ ಹೈಸ್ಪೀಡ್ ರೈಲೂ ಬರಲ್ಲ: ಡಿಸಿಎಂ ಡಿಕೆಶಿ ವ್ಯಂಗ್ಯ.
ದೇಶದ ಬಂಡವಾಳ ವೆಚ್ಚವು 2026–27ರ ಸಾಲಿನಲ್ಲಿ ದಾಖಲೆಯ ಗರಿಷ್ಠ ಮಟ್ಟ ತಲುಪಲಿದೆ. ದೇಶದ ಜಿಡಿಪಿಯ ಗಾತ್ರದ ಶೇ 4.4 ರಷ್ಟನ್ನು, ಅಂದರೆ ₹12.22 ಲಕ್ಷ ಕೋಟಿಯನ್ನು ಬಂಡವಾಳ ವೆಚ್ಚಗಳಿಗಾಗಿ ಮೀಸಲು ಇಡಲಾಗಿದೆ. ಈ ಮೂಲಕ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ.
.Union Budget 2026 | ಬಂಡವಾಳ ವೆಚ್ಚ: ದಾಖಲೆಯ ₹12.22 ಲಕ್ಷ ಕೋಟಿ ನಿಗದಿ.
ಭಾರತವು ಇರಾನ್ ಬದಲಿಗೆ ವೆನೆಜುವೆಲಾದಿಂದ ಕಚ್ಚಾತೈಲವನ್ನು ಖರೀದಿ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.
.ಭಾರತವು ಇರಾನ್ ಬದಲಿಗೆ ವೆನೆಜುವೆಲಾದಿಂದ ತೈಲ ಖರೀದಿಸಲಿದೆ: ಡೊನಾಲ್ಡ್ ಟ್ರಂಪ್.
ದೇವದತ್ತ ಪಡಿಕ್ಕಲ್ ಅವರು ಭಾನುವಾರ ದಾಖಲಿಸಿದ ಶತಕವು ಕರ್ನಾಟಕದ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಬಹುಕಾಲ ಸಿಹಿನೆನಪಾಗಿ ಉಳಿಯಲಿದೆ. ಏಕೆಂದರೆ; ಅವರ ಶತಕದ ಬಲದಿಂದ ಕರ್ನಾಟಕವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿತು.
.Ranji Trophy: ಪಡಿಕ್ಕಲ್ ಶತಕ; ಪಂಜಾಬ್ ಮಣಿಸಿ ಎಂಟರ ಘಟ್ಟಕ್ಕೇರಿದ ಕರ್ನಾಟಕ.
ಆಲ್ರೌಂಡರ್ ಕನಿಷ್ಕ್ ಚೌಹಾಣ್ ಅವರ ಅಮೋಘ ಆಟದ ಹಾಗೂ ವೇದಾಂತ್ ತ್ರಿವೇದಿ ಅರ್ಧಶತಕದ ಬಲದಿಂದ ಭಾರತ 19 ವರ್ಷದೊಳಗಿನವರ ತಂಡವು ಐಸಿಸಿ ಯೂತ್ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಜಯಿಸಿತು. ಇದರೊಂದಿಗೆ ಭಾರತದ ಯುವಪಡೆ ಸೆಮಿಫೈನಲ್ಗೆ ಲಗ್ಗೆ ಇಟ್ಟಿತು.
.ಯೂತ್ ವಿಶ್ವಕಪ್: ಪಾಕಿಸ್ತಾನವನ್ನು ಸೋಲಿಸಿ ಸೆಮಿಫೈನಲ್ ತಲುಪಿದ ಭಾರತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.