ನವದೆಹಲಿ: ಖಾಸಗಿ ಭದ್ರತಾ ಸಿಬ್ಬಂದಿಗೆ ಆರ್‌ಎಸ್‌ಎಸ್ ಶಾಖೆಗಳಲ್ಲಿ ತರಬೇತಿ ನೀಡಬೇಕು. ಈಗ ಅವರು ಪಡೆಯುತ್ತಿರುವ ತರಬೇತಿಗಿಂತ ಬಹಳ ಉತ್ತಮವಾದ ತರಬೇತಿ ಅಲ್ಲಿ ದೊರೆಯುತ್ತದೆ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ಪ್ರತಿಪಾದಿಸಿದ್ದಾರೆ.

ಖಾಸಗಿ ಭದ್ರತಾ ಸಂಸ್ಥೆಗಳ ಸಮಾವೇಶದಲ್ಲಿ ಗೋಯಲ್ ಹೀಗೆ ಹೇಳಿದ್ದಾರೆ.

‘ಖಾಸಗಿ ಭದ್ರತಾ ಸಿಬ್ಬಂದಿಗೆ ದೊಡ್ಡ ಮಟ್ಟದ ತರಬೇತಿ ನೀಡಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ. ಭದ್ರತಾ ಸಿಬ್ಬಂದಿಗೆ ಈಗ ದೊರೆಯುವ ತರಬೇತಿಗಿಂತ ಆರ್‌ಎಸ್‌ಎಸ್ ಶಾಖೆಗಳಲ್ಲಿ ದೊರೆಯುವ ತರಬೇತಿ ಬಹಳ ಮೇಲ್ಮಟ್ಟದ್ದಾಗಿರುತ್ತದೆ ಎಂಬುದು ನನ್ನ ಭಾವನೆ’ ಎಂದು ಅವರು ಹೇಳಿದ್ದಾರೆ. ತಕ್ಷಣವೇ, ಸ್ಪಷ್ಟನೆ ಕೊಟ್ಟ ಅವರು, ‘ಎಲ್ಲ ಭದ್ರತಾ ಸಿಬ್ಬಂದಿಯನ್ನೂ ಆರ್‌ಎಸ್‌ಎಸ್ ಶಾಖೆಗೆ ತರಬೇತಿಗೆ ಕಳುಹಿಸಬೇಕು ಎಂಬುದು ನನ್ನ ಮಾತಿನ ಅರ್ಥ ಅಲ್ಲ’ ಎಂದೂ ಹೇಳಿದರು.

‘ಆದರೆ, ಇದು ಕೆಟ್ಟದೇನೂ ಅಲ್ಲ, ನಾವು ಏನನ್ನಾದೂ ಕಲಿಯುತ್ತೇವೆ. ಅಲ್ಲಿ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಸುಧಾರಣೆಯಾಗುತ್ತದೆ’ ಎಂದು ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ಭದ್ರತಾ ಕ್ಷೇತ್ರದಲ್ಲಿ ಪ್ರತಿಭೆಯ ಆಧಾರದಲ್ಲಿ ಪ್ರಮಾಣೀಕರಣದ ವ್ಯವಸ್ಥೆ ಇರಬೇಕು. ಹಾಗಿದ್ದಾಗ, ಭದ್ರತಾ ಸಿಬ್ಬಂದಿಯನ್ನು ಅದರ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಬಹುದು ಮತ್ತು ಅವರಿಗೆ ಬಡ್ತಿಯನ್ನೂ ನೀಡಬಹುದು ಎಂದು ಅವರು ಹೇಳಿದರು.

ಭದ್ರತಾ ಸಿಬ್ಬಂದಿಗೆ ಕನಿಷ್ಠ ವೇತನ, ಭರವಸೆ ಕೊಟ್ಟಂತಹ ಸೌಲಭ್ಯಗಳು ದೊರಕಬೇಕು. ಭದ್ರತಾ ಸಿಬ್ಬಂದಿಯನ್ನು ಪೂರೈಸುವ ಮಾನ್ಯತೆ ಪಡೆದ ಸಂಸ್ಥೆಗಳು ಇರಬೇಕು ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.