ಹೈದರಾಬಾದ್: ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಮಂಡಳಿಯು ಪರಿಹಾಧನ ಚೆಕ್ಗಳ ವಿತರಣೆಯನ್ನು ಭಾನುವಾರ (ಜ.12) ಆರಂಭಿಸಲಿದೆ.

ಮೃತರ ಕುಟುಂಬಗಳಿಗೆ ತಲಾ ₹25 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ತಲಾ ₹5 ಲಕ್ಷ ಹಾಗೂ ಸಣ್ಣ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ ₹ 2 ಲಕ್ಷ ಪರಿಹಾರ ನೀಡಲು ಮಂಡಳಿ ನಿರ್ಧರಿಸಿದೆ.

ಶನಿವಾರ ಟಿಟಿಡಿ ಮಂಡಳಿ ಅಧ್ಯಕ್ಷ ಬಿ.ಆರ್.ನಾಯ್ಡು ಅಧ್ಯಕ್ಷೆಯಲ್ಲಿ ನಡೆದ ಸಭೆಯಲ್ಲಿ, ಪರಿಹಾರ ಚೆಕ್ ವಿತರಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲಾಯಿತು.

ಮೃತಪಟ್ಟಿರುವ 6 ಮಂದಿಯ ಕುಟುಂಬಗಳನ್ನು ಹಾಗೂ ಗಾಯಗೊಂಡವರನ್ನು ಖುದ್ದಾಗಿ ಭೇಟಿ ಮಾಡುವುದು, ಪರಿಹಾರದ ಚೆಕ್ ವಿತರಣೆ ಉಸ್ತುವಾರಿಗಾಗಿ ಸ್ಥಳೀಯ ಶಾಸಕರು ಹಾಗೂ ಟಿಟಿಡಿ ಸದಸ್ಯರನ್ನು ಒಳಗೊಂಡ ಎರಡು ಸಮಿತಿಗಳನ್ನು ನಾಯ್ಡು ರಚಿಸಿದರು.

ಕಾಲ್ತುಳಿತದಲ್ಲಿ ಮೃತಪಟ್ಟವರ ಮಕ್ಕಳಿಗೆ ಟಿಟಿಡಿ ಅಧೀನದ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ ನೀಡಲು ಕೂಡ ಮಂಡಳಿ ನಿರ್ಧರಿಸಿದೆ.

ವಿಶೇಷ ದರ್ಶನಕ್ಕೆ ವ್ಯವಸ್ಥೆ: ಕಾಲ್ತುಳಿತ ಘಟನೆಯಲ್ಲಿ ಗಾಯಗೊಂಡವರಿಗೆ ವೈಕುಂಠ ದ್ವಾರ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲು ಕೂಡ ಟಿಟಿಡಿ ನಿರ್ಧರಿಸಿದೆ. ಮುಂದಿನ ಕೆಲ ದಿನಗಳ ಕಾಲ ಈ ವ್ಯವಸ್ಥೆ ಇರಲಿದೆ.
.ತಿರುಪತಿ ಕಾಲ್ತುಳಿತ; ಗಾಯಗೊಂಡವರಿಗೆ ತಿಮ್ಮಪ್ಪನ ವಿಶೇಷ ದರ್ಶನ: ಟಿಟಿಡಿ.ತಿರುಪತಿ ಕಾಲ್ತುಳಿತ ದುರಂತ: ನ್ಯಾಯಾಂಗ ತನಿಖೆಗೆ ಸಿಎಂ ನಾಯ್ಡು ಆದೇಶ.Video | Tirupati Stampede: ತಿರುಪತಿ ದೇಗುಲದಲ್ಲಿ ಕಾಲ್ತುಳಿತ; ಆರು ಮಂದಿ ಸಾವು.ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಕಾಲ್ತುಳಿತ! TTD ಅಧ್ಯಕ್ಷರು ಹೇಳಿದ್ದೇನು?.ತಿರುಪತಿ ಕಾಲ್ತುಳಿತ ದುರಂತ: ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?.ತಿರುಪತಿ ಕಾಲ್ತುಳಿತ ದುರಂತ:ನೆರವು ನೀಡುವಂತೆ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಮನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.