ತ್ಯಾಜ್ಯ ವಿಲೇವಾರಿ ವಿಚಾರ ರಾಜಕೀಯಕರಣಗೊಳಿಸಬೇಡಿ. ತ್ಯಾಜ್ಯದಲ್ಲಿ ಶೇ 60ರಷ್ಟು ಮಣ್ಣಿದ್ದು ಶೇ 40ರಷ್ಟು ನಾಫ್ತಾಲ್ ಇದೆ. ಇದೆಲ್ಲವೂ ಹಾನಿಕಾರಕವಲ್ಲ
ಮೋಹನ್ ಯಾದವ್ ಮುಖ್ಯಮಂತ್ರಿ ಮಧ್ಯಪ್ರದೇಶ
ಏನೀದು ತ್ಯಾಜ್ಯ..?
1984ರ ಡಿಸೆಂಬರ್ 2 ಮತ್ತು 3ರ ನಡುವಿನ ರಾತ್ರಿ ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಕಂಪನಿಯ ಕಾರ್ಖಾನೆಯಿಂದ ಸೋರಿಕೆಯಾದ ವಿಷಕಾರಿ ಮಿಥೈಲ್ ಐಸೊಸಯನೇಟ್ (ಎಂಐಸಿ) ಅನಿಲವು 5479 ಜನರ ಸಾವಿಗೆ ಕಾರಣವಾಗಿತ್ತು. ಸಾವಿರಾರು ಮಂದಿ ಇತರರು ದೀರ್ಘಾವಧಿಯ ಗಂಭೀರ ಆರೋಗ್ಯ ಪರಿಣಾಮಗಳಿಗೆ ತುತ್ತಾಗಿದ್ದರು. ಇಲ್ಲಿದ್ದ 337 ಟನ್ ವಿಷಕಾರಿ ತ್ಯಾಜ್ಯವನ್ನು ಭೋಪಾಲ್‌ನಿಂದ ಫೀಥಾಂಪುರದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಮಧ್ಯಪ್ರದೇಶ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಈ ತ್ಯಾಜ್ಯವು ಗುರುವಾರವೇ ಪೀಥಾಂಪುರಕ್ಕೆ ತಲುಪಿದೆ.