ಲಖನೌ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದ ಮೊಕದ್ದಮೆ ದಾಖಲಿಸಲಾಗಿರುವ 57 ಮಂದಿಯ ಹೆಸರು, ವಿವರಗಳನ್ನು ಒಳಗೊಂಡ ಬೃಹತ್ ಫಲಕಗಳನ್ನು ಆಯಕಟ್ಟಿನ ವೃತ್ತಗಳು, ಪ್ರಮುಖ ರಸ್ತೆಗಳಲ್ಲಿ ಉತ್ತರ ಪ್ರದೇಶ ಸರ್ಕಾರ ಪ್ರದರ್ಶಿಸಿದೆ.

ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ದ ಪೊಲೀಸ್ ಬಲ ಬಳಕೆಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳಲ್ಲಿ ಕೋರ್ಟ್ನಿಂದ ಟೀಕೆ ವ್ಯಕ್ತವಾಗಿರುವ ಬೆಳವಣಿಗೆಗಳ ನಂತರವೂ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಲಖನೌನ ಸ್ಥಳೀಯ ಆಡಳಿತ ಈ ಫಲಕಗಳನ್ನು ಅಳವಡಿಸಿದೆ. ಈ ಮಧ್ಯೆ, ಹಿಂಸಾಚಾರ ಘಟನೆಗಳಿಗೆ ಸಂಬಂಧಿಸಿದ ಸಾರ್ವಜನಿಕ ಆಸ್ತಿ ನಷ್ಟ ಕುರಿತು ₹ 1.55 ಕೋಟಿ ವಸೂಲಿಗೆ ಸಂಬಂಧಿಸಿ ಈಗಾಗಲೇ ಈ ಎಲ್ಲರಿಗೂ ನೋಟಿಸ್ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ, ಸ್ಥಳೀಯ ಆಡಳಿತ ಪ್ರಕಟಿಸಿರುವ ಬೃಹತ್ ಫಲಕಗಳಲ್ಲಿ ಮಾಜಿ ಐಪಿಎಸ್ ಅಧಿಕಾರಿ ಎಸ್.ಆರ್.ದರಪುರಿ ಅವರ ಹೆಸರೂ ಇದೆ. ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ‘ಸ್ಥಳೀಯ ಆಡಳಿತ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.