ನವದೆಹಲಿ: ಭಾರತದಲ್ಲಿ 2014ರಿಂದ 2024ರ ಅವಧಿಯಲ್ಲಿ ಮತದಾನದ ಪ್ರಮಾಣವನ್ನು ವೃದ್ಧಿಸಲು ಅಮೆರಿಕದ ಅಂತರರಾಷ್ಟ್ರೀಯ ನೆರವು ನಿಧಿಯು (ಯುಎಸ್ಎಐಡಿ) 21 ಮಿಲಿಯನ್ ಡಾಲರ್ನಷ್ಟು (₹183.64 ಕೋಟಿ) ಆರ್ಥಿಕ ನೆರವನ್ನು ಸ್ವೀಕರಿಸಿಲ್ಲ ಅಥವಾ ಒದಗಿಸಿಲ್ಲ ಎಂದು ಅಮೆರಿಕದ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ರಾಜ್ಯಸಭೆಗೆ ತಿಳಿಸಿದೆ.

ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಅವರ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಖಾತೆ ಸಚಿವ ಕೀರ್ತಿ ವರ್ಧನ್ ಸಿಂಗ್ ಲಿಖಿತ ಉತ್ತರ ನೀಡಿದ್ದಾರೆ.

ಭಾರತದಲ್ಲಿ ಯುಎಸ್ಎಐಡಿ ನೆರವು ಅಥವಾ ಅನುದಾನಿತ ಯೋಜನೆಗಳ ಮೂಲಕ ವೆಚ್ಚ ಮಾಡಲಾಗಿರುವ ಕಾರ್ಯಕ್ರಮಗಳ ವಿವರಗಳನ್ನು ತುರ್ತಾಗಿ ಒದಗಿಸುವಂತೆ ಅಮೆರಿಕದ ರಾಯಭಾರ ಕಚೇರಿಗೆ ಫೆಬ್ರುವರಿ 28ರಂದು ತಿಳಿಸಲಾಗಿತ್ತು.

ರಾಯಭಾರ ಕಚೇರಿಯು ಈ ಕುರಿತ ದತ್ತಾಂಶವನ್ನು ಜುಲೈ 2ರಂದು ಹಂಚಿಕೊಂಡಿದ್ದು, 2014ರಿಂದ 2024ರವರೆಗೆ ಭಾರತದಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಯುಎಸ್ಎಐಡಿ 21 ಮಿಲಿಯನ್ ಹಣವವನ್ನು ಸ್ವೀಕರಿಸಿಲ್ಲ ಅಥವಾ ಒದಗಿಸಿಲ್ಲ ಎಂದು ಮಾಹಿತಿ ನೀಡಿದೆ. ಅಲ್ಲದೆ ಮತದಾನ ವೃದ್ಧಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳನ್ನೂ ನಡೆಸಿಲ್ಲ ಎಂದು ಅದು ತಿಳಿಸಿದೆ ಎಂದು ಸಚಿವರು ಪ್ರತಿಕ್ರಿಯೆಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.