ಹಥಾರಸ್ : ಉತ್ತರಪ್ರದೇಶದ ಹಥಾರಸ್ನಲ್ಲಿ ರೈಲು ಡಿಕ್ಕಿ ಹೊಡೆದು ಮಾನಸಿಕ ಕಾಯಿಲೆಯಿಂದ ಬಳಲುತಿದ್ದ ತಾಯಿ ಹಾಗೂ ಆಕೆಯ ಮಗ ಮೃತಪಟ್ಟಿದ್ದಾರೆ.

ಮೃತರನ್ನು ದುರ್ಗಪಾಲ್ ಎಂಬವರ ಪತ್ನಿ ಓಂವತಿ ದೇವಿ (55) ಹಾಗೂ ಮಗ ಅನೀಲ್ (32) ಎಂದು ಗುರುತಿಸಲಾಗಿದೆ. ಇನಾಯತ್ ಪುರದ ನಿವಾಸಿಯಾದ ಓಂವತಿ ದೇವಿಯು ಕೆಲ ದಿನಗಳಿಂದ ಮಾನಸಿಕ ಕಾಯಿಲೆಗೆ ತುತ್ತಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ರಾತ್ರಿ ಓಂವತಿ ದೇವಿಯು ಮನೆಯಿಂದ ಹೊರಗೆ ಹೋಗಿದ್ದಾಳೆ. ಮಗ ಅನೀಲ್ ಆಕೆಯನ್ನು ಹುಡುಕಿಕೊಂಡು ಹೋದಾಗ ಆಕೆ ರತಿ ಕಾ ನಾಗ್ಲಾ ರೈಲು ನಿಲ್ದಾಣದ ಹಳಿಯ ಮೇಲೆ ನಿಂತಿರುವುದನ್ನು ಗಮನಿದ ಅನಿಲ್ ತನ್ನ ತಾಯಿಯನ್ನು ರಕ್ಷಿಸಲು ಪ್ರಯತ್ನಿಸಿದ್ದಾನೆ. ಅದೇ ವೇಳೆಗೆ ರೈಲು ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹಸಾಯನ್ ಲಲಿತ್ ಕುಮಾರ್ ತಿಳಿಸಿದ್ದಾರೆ.

ತಡ ರಾತ್ರಿಯಾದರೂ ಇಬ್ಬರು ಮನೆಗೆ ಬಾರದ ಕಾರಣ ಕುಟುಂಬದವರು ಹುಡುಕಿದಾಗ ರೈಲು ಹಳಿಯ ಮೇಲೆ ಮೃತ ದೇಹಗಳು ಪತ್ತೆಯಾಗಿವೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.