ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಸುರಂಗದಿಂದ ಹೊರ ಬಂದ ಕಾರ್ಮಿಕರನ್ನು ಭೇಟಿ ಮಾಡಿದ ಸಿಎಂ ಆದಿತ್ಯನಾಥ

Published 1 ಡಿಸೆಂಬರ್ 2023, 11:33 IST
Last Updated 1 ಡಿಸೆಂಬರ್ 2023, 11:33 IST
ಅಕ್ಷರ ಗಾತ್ರ

ಲಖನೌ: ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಿಂದ ಸುರಕ್ಷಿತವಾಗಿ ಹೊರಬಂದ 41 ಕಾರ್ಮಿಕರ ಪೈಕಿ ರಾಜ್ಯದ 8 ಮಂದಿ ಕಾರ್ಮಿಕರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇಂದು (ಶುಕ್ರವಾರ) ತಮ್ಮ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.

ಪ್ರತಿಯೊಬ್ಬ ಕಾರ್ಮಿಕನ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸಿಎಂ ವೈಯಕ್ತಿಕವಾಗಿ ವಿಚಾರಿಸಿದರು. ಕಾರ್ಮಿಕರ ಕುಟುಂಬದವರ ಬಗ್ಗೆಯೂ ಕೇಳಿದರು. ಅಲ್ಲದೆ, ಕಾರ್ಮಿಕರಿಗೆ ಶಾಲು ಮತ್ತು ಉಡುಗೊರೆಗಳನ್ನು ನೀಡುವ ಮೂಲಕ ಧೈರ್ಯ ತುಂಬಿದರು ಎಂದು ವಕ್ತಾರರು ತಿಳಿಸಿದ್ದಾರೆ.

ಶ್ರಾವಸ್ತಿ ಜಿಲ್ಲೆಯವರಾದ ಅಂಕಿತ್‌, ರಾಮ್‌ ಮಿಲನ್‌, ಸತ್ಯದೇವ, ಸಂತೋಷ್‌, ಜೈ ಪ್ರಕಾಶ್‌ ಮತ್ತು ರಾಮ ಸುಂದರ್‌ ಹಾಗೂ ಲಖೀಂಪುರ ಖೇರಿಯ ಮಂಜಿತ್‌, ಮಿರ್ಜಾಪುರದ ಅಖಿಲೇಶ್‌ ಕುಮಾರ್‌ ಸಿಎಂ ಭೇಟಿ ಮಾಡಿದ ಕಾರ್ಮಿಕರಾಗಿದ್ದಾರೆ.

ನವೆಂಬರ್‌ 12 ರಂದು ಸುರಂಗ ಮಾರ್ಗದ ಒಂದು ಭಾಗ ಕುಸಿದ ಪರಿಣಾಮ ಸುಮಾರು 41 ಕಾರ್ಮಿಕರು ಸುರಂಗದೊಳಗೆ ಸಿಲುಕಿದ್ದರು. ಸುಮಾರು 17 ದಿನಗಳ ಕಾರ್ಯಾಚರಣೆಯ ನಂತರ ಕಾರ್ಮಿಕರನ್ನು ರಕ್ಷಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT